ನಿಮ್ಮನ್ನು ಏನನ್ನು guess ಮಾಡಲು ಕೇಳುತ್ತಿಲ್ಲ, ಇದೊಂದು ಪದದಿಂದ ಆದ ಅವಾಂತರದ ಬಗ್ಗೆ ತಿಳಿಯಪಡಿಸಲು ಇಚ್ಛಿಸುತ್ತೇನೆ.
ಆರೇಳು ವರ್ಷದ ಹಿಂದಿನ ಮಾತು. ನಮ್ಮ ತಂದೆ ತಾಯಿ ಇಬ್ಬರೂ ಊರಿಗೆ ಹೊರಟಿದ್ದರು. ನಮ್ಮ ತಂದೆಯ ಆಫೀಸಿನಲ್ಲಿ ಈಶ್ವರಯ್ಯ ಎನ್ನುವವರೊಬ್ಬರು ಕೆಲಸ ಮಾಡುತ್ತಿದ್ದರು. ಅವರಿಗೆ ಒಂದು ಮುಖ್ಯವಾದ ಸಂದೇಶವನ್ನು ತಲುಪಿಸಬೇಕಿತ್ತು. ಅವರು ಫೋನಿಸಿದರೆ ವಿಷಯವನ್ನು ಹೇಳಿಬಿಡು ಎಂದು ನಮ್ಮ ತಂದೆ ಹೇಳಿ ಹೋದರು. ಅವರು ಹೊರಟ ಹತ್ತು ನಿಮಿಷದಲ್ಲೇ ಫೋನ್ ಬಂದಿತು.
ನಾನು : ಹಲೋ...ಯಾರು ಮಾತಾಡುತ್ತಿರುವುದು ?
ಆತ: guess ?
ನಾನು : sorry, ಗೊತ್ತಾಗುತ್ತಿಲ್ಲ.
ಆತ : ನಾನು ಈಶ್ವರಯ್ಯ .
ನಾನು : ಅಂಕಲ್ ....ಅಪ್ಪ ನಿಮಗೆ ಈ ವಿಷಯ ಹೇಳು ಅಂತ ಹೇಳಿದರು.....ಆಫೀಸಿನಲ್ಲಿ ಇವತ್ತು.....
ಆತ : ಹ ಹಹಹಹಹಹ!!!!
ನಾನು : ಯಾಕೀ ನಗು ?
ಆತ : ನನ್ನ voice ಕಂಡುಹಿಡಿಯಲು ಆಗ್ಲಿಲ್ವಾ ?guess ಮಾಡಕ್ಕೆ ಬರಲ್ವಾ ? ನಾನು ಈಶ್ವರಯ್ಯ ಅಲ್ಲ....ಶ್ರೀರಾಮ.
ಸದ್ಯ ನಾನು ಪೂರ್ತಿ ವಿಷಯ ಹೇಳುವುದರ ಮುಂಚೆಯೇ ಹೀಗೆ ಹೇಳಿದರು ಪುಣ್ಯಾತ್ಮರು !!!
ನಮ್ಮನ್ನು voice identifiers ಎಂದುಕೊಳ್ಳುವ ಜನರ ಬುದ್ಧಿಗೆ ಏನೆಂದುಕೊಳ್ಳಬೇಕು ?
ಬೆಳಗ್ಗೆ ಹೊತ್ತು ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ವಿಪರೀತ ಬ್ಯುಸಿಯಾಗಿರುತ್ತಾರೆ....ಆಗ ಕೆಲವರು (ಆವತ್ತು ಅವರು ಆಫೀಸಿಗೆ ರಜೆ ಹಾಕಿ ಲೋಕಕ್ಕೇ ರಜೆ ಇದೆ ಎಂದು ಭಾವಿಸಿ) ಫೋನಿಸಿ, "ನಾವು ಯಾರೆಂದು guess ಮಾಡಿ ? "ಎಂದು ಗೋಳುಹೊಯ್ಯ್ದುಕೊಳ್ಳುವುದರಲ್ಲಿ ಅದೆಂತಹ thrill ಸಿಗತ್ತೆ ?
ಇನ್ನೊಮ್ಮೆ ಹೀಗಾಯ್ತು ...
ನಾನು : ಹಲೋ....
ಆತ : ನೀನು ಲಕ್ಷ್ಮಿ ಎಂದು ನಾನು ಗುರುತಿಸಿದ್ದೇನೆ. ಈಗ ನಾನು ಯಾರೆಂದು ನನ್ನ ಧ್ವನಿ ಗುರುತಿಸು.
ನಾನು : ಸರ್ವಾಂತರ್ಯಾಮಿಗಳಿಗೆ ನಮೋ ನಮಃ. ನಾನು ಅಜ್ಞೆ. ದಯಮಾಡಿ ನಿಮ್ಮ ಹೆಸರನ್ನು ಹೇಳಿ.
ಆತ : ಏನು ಇಷ್ಟು ಬೇಗ patience ಕಳೆದುಕೊಂಡರೆ...ನೀನಿನ್ನು ಓದುವ ಹುಡುಗಿ...ನೆನಪಿನ ಶಕ್ತಿ ಚೆನ್ನಾಗಿದೆಯಾ ಇಲ್ವ ಅಂತ ಪರೀಕ್ಷೆ ಮಾಡುತ್ತಿದ್ದೇನೆ. ಹೇಳು ನಾನು ಯಾರು !
ನಾನು : ಅಂಕಲ್, ಈಗ ಸಮಯ ಬೆಳಗ್ಗೆ ಎಂಟು ಮುಕ್ಕಾಲು. ನಾನು ಕಾಲೇಜಿಗೆ ಹೊರಟಿದ್ದೇನೆ. ನೀವು ಪರಿಚಿತರು ಹೌದು . ಆದರೆ ಗುರುತಿಸಲಾಗುತ್ತಿಲ್ಲ. ನನ್ನ ನೆನಪಿನ ಶಕ್ತಿ, ಗ್ರಹಣ ಶಕ್ತಿ, ಇವೆಲ್ಲವನ್ನು ನೀವು ನಂತರ ಪರೀಕ್ಷಿಸಿ...ಯಾರು ಮಾತಾಡುತ್ತಿರುವುದು ?
ಆತ : ಹೇಳೊಲ್ಲ.
ನಾನು ಫೋನ್ ಕಟ್ ಮಾಡಿದೆ. ನಾನು ಹಾಗೆ ಮಾಡಿದ್ದಕ್ಕೆ ನಂತರ ಅವರು ಫೋನ್ ಮಾಡಿ ನಮ್ಮ ತಾಯಿ ತಂದೆಯರಿಗೆ "ಏನ್ರಿ ನಿಮ್ಮ ಮಗಳಿಗೆ patience " ಏ ಇಲ್ಲ ? ಅಂದರಂತೆ !!
ನಾನು ಅವರಿಗೆ ಒಮ್ಮೆ ಹೀಗೆ "guess " ಮಾಡಿ ಎಂದು ಕೇಳಲು ಹವಣಿಸುತ್ತಿದ್ದೇನೆ. thrill ಗಾಗಿ ಅಲ್ಲ....ಅವರಿಗೆ ತಕ್ಕ ಪಾಠ ಕಲಿಸಲು ! ಅವರು ನನ್ನನ್ನು ಬೈದರು ಎಂದಲ್ಲ...ಆದರೆ ಪರಿಸ್ಥಿತಿಯ ಕಲ್ಪನೆ ಇಲ್ಲದಿದ್ದರೂ ಸಾಮಾನ್ಯ ಪ್ರಜ್ಞೆ ಇರಬೇಕಲ್ಲವೇ ?
ಇನ್ನು caller ID ಫೋನ್ ಗಳು ಬಂದವು. ಹತ್ತಿಪ್ಪತ್ತು ನಂಬರ್ ಗಳು ಮಾತ್ರ store ಮಾಡಬಹುದಿತ್ತು. ಮಿಕ್ಕೆಲ್ಲವೂ ಬರೀ ನಂಬರ್ ಗಳೇ. ಈ ಸರ್ತಿ ನಮ್ಮ ತಂದೆಯ ಸರದಿ. ಅವರದೆ ಯಾರೋ ಒಬ್ಬ ಸ್ನೇಹಿತರು ಬೇರೆ ಊರಿನಿಂದ ಬಂದಿದ್ದರಂತೆ...ನಮ್ಮ ತಂದೆಯೊಡನೆ ಮಾತಾಡಲಿಚ್ಛಿಸಿ ರಾತ್ರಿ ಹನ್ನೊಂದಕ್ಕೆ ಫೋನಿಸಿದರು ಮಹಾನುಭಾವರು.
ಆತ : ಏನೋ...ನಾನು ಯಾರೆಂದು ಗೊತ್ತಾಯ್ತ ?
ನನ್ನ ತಂದೆ: ಇಲ್ವಲ್ಲಾ .....
ಆತ : caller ID ಲಿ ನಂಬರ್ ನೋಡೊ ! ನೆನ್ಪಾಗ್ಲಿಲ್ವಾ ?
ನನ್ನ ತಂದೆ: ಇಲ್ಲ.
ಆತ : ನನಗೆ ನಿನ್ನ ನಂಬರ್ ನೆನ್ಪಿದೆ...ಏನ್ ಮಹರಾಯಾ...ನಿನಗೆ ಈ ಪರಂಧಾಮನ ಭಾವನ ತಮ್ಮನ ಮನೆಯ ನಂಬರ್ ನೆನಪಿಲ್ವ ?
ನಮ್ಮ ತಂದೆ: ಯಾವ ಪರಂಧಾಮ ? painter ? electrician? chief electrical inspectorate?
ಆತ : ಏನೋ....ಹೀಗೆ ಕೇಳ್ತಿಯಾ ?
ನಮ್ಮ ತಂದೆ : ಮಹಾನುಭಾವ...ನಿನಗೆ ನನ್ನ ಹೆಸರಿನವರು ಒಬ್ಬನೇ ಪರಿಚಯ ಇರಬಹುದು, ಆದರೆ ನನಗೆ ನಿನ್ನ ಹೆಸರಿನವನು ಒಬ್ಬನೇ ಪರಿಚಯ ಇದ್ದೀನೆಂದು ನೀನು ಹೇಗೆ ಅಂದುಕೊಂಡೆ ? ಸರ್ವೋತ್ತಿನಲ್ಲಿ ಫೋನ್ ಮಾಡಿದರೆ ನನಗೆ ಮೊದಲು ನನ್ನ ಕೆಲಸದಲ್ಲಿರುವವರು ನೆನಪಾಗುವರೇ ಹೊರತು ನೀನು ಹೇಗೆ ನೆನಪಾಗುತ್ತೀಯ ? ಎಲ್ಲಿ ಏನು ಆಯ್ತೋ ಎಂದೇ ಮನಸ್ಸು ಯೋಚಿಸುತ್ತದೆ. ನೀನು ನಂಬರ್ ಗಳನ್ನು ನೆನಪಿಟ್ಟುಕೊಂಡಿದ್ದೀಯ...ಭೇಷ್ ! ಮೆಚ್ಚಿದೆ ನಿನ್ನ ಬುದ್ಧಿಶಕ್ತಿಯನ್ನ...ನಾನು ವ್ಯಾಪಾರಸ್ಥ. ನೆನಪಿಟ್ಟುಕೊಳ್ಳುವ ನಂಬರ್ ಗಳು ಸಾವಿರಾರಿವೆ. prioritize ಮಾಡಲೇಬೇಕಾಗತ್ತೆ. ನೀನು ನೆನಪಿದ್ದೀ...ಆದರೆ ನಿನ್ನ ಭಾವ...ಅವರ ಪರಿಚಯ ಇಲ್ಲ, ಅವನ ತಮ್ಮ...ಗೊತ್ತೇ ಇಲ್ಲ...ಅವರ ನಂಬರ್ ನನಗೆ ಹೇಗೆ ಗೊತ್ತಾಗಬೇಕು ? ನೀನು ನಂಬರ್ ಗಳನ್ನು ಕರತಲಾಮಲಕ ಮಾಡಿಕೊಂಡ ಸರ್ವಜ್ಞನೇ... doubt ಇಲ್ಲ....ಆದರೆ ಎಲ್ಲರೂ ನಿನ್ನಂತೆ ಎಂದು ಭಾವಿಸಬೇಡಪ್ಪ...
ಆತನಿಗೆ ಬೇಜಾರಯಾತಂತೆ...ಆದರೆ ತಪ್ಪು ತಿದ್ದಿಕೊಂಡರು ಸಧ್ಯ...ಮುಂದಿನ ಸರ್ತಿ ಫೋನ್ ಮಾಡಿದಾಗ "ನಾನು ಮೈಸೂರಿನ ಪರಂಧಾಮ" ಎಂದರು !! ಸದ್ಯ !
ಇನ್ನು ಮೊಬೈಲ್ ಬಂದ ಮೇಲೆ ಎಲ್ಲರೂ ನಂಬರ್ ಗಳನ್ನು ಮರೆತೇಹೋಗಿದ್ದಾರೆ. ನಮ್ಮ ನಮ್ಮ ನಂಬರ್ ಗಳನ್ನೇ ಸ್ತೋರ್ ಮಾಡಿಟ್ಟುಕೊಳ್ಳುವಂತಾಗಿದೆ. ಬಸ್ಸಿನಲ್ಲಿ ಯಾರೋ ಒಬ್ಬರಿಗೆ ಪಾಪ ಇನ್ಯಾರೋ ಫೋನಿಸಿ ಹೀಗೆ "guess ??" ಎಂದು ಸತಾಯಿಸುತ್ತಿದ್ದರು.ಕಡೆಗೆ ಅದು ಅವರ ಸೋದರ ಮಾವ ಎಂದು ೨೦ ನಿಮಿಷ ಆದ ಮೇಲೆ ಹೇಳಿದರು ಆತ !ಹೊಸ ನಂಬರ್ ನನ್ನದು ಎಂದು ಹೇಳುವ ಹೊಸ ರೀತಿ ಇದು ಎಂದು ನಂತರ ಗೊತ್ತಾಯಿತು ! ನಾನು ಪಕ್ಕದಲ್ಲೇ ಕೂತಿದ್ದೆ. ನನಗೂ ಈ ಘಟನೆಗಳು ನೆನಪಾದವು.
ತಮಗೆ ಕೆಲಸವಿಲ್ಲದಿದ್ದರೆ, ಬಿಡುವಿದ್ದರೆ, ಲೋಕಕ್ಕೆಲ್ಲಾ ಬಿಡುವಿದೆ,ಎಂದು ತಿಳಿದು ಹೀಗೆ ಅತೀ ಕ್ಷುಲ್ಲಕವಾಗಿ ಆಡುತ್ತೀವಲ್ಲ ...ನಾವೇಕೆ ಹೀಗೆ ?
11 comments:
oLLe anubhava hELiddeya ma.
naanu hosa numb togondaaga bereyavarige ph maadi kELteeni... kelavaru...nan voice guess maadthare.. kelavarige naane hELibiDteeni.. because time is precious for all :)
naaveke heege andre... swalpa thamashe maaDoke ashte..(nan abhipraaya)
"ತಮಗೆ ಕೆಲಸವಿಲ್ಲದಿದ್ದರೆ, ಬಿಡುವಿದ್ದರೆ, ಲೋಕಕ್ಕೆಲ್ಲಾ ಬಿಡುವಿದೆ,ಎಂದು ತಿಳಿದು ಹೀಗೆ ಅತೀ ಕ್ಷುಲ್ಲಕವಾಗಿ ಆಡುತ್ತೀವಲ್ಲ ...ನಾವೇಕೆ ಹೀಗೆ ?"
yaake andre namge modle kelsa iralla, adu saaldu anta idikkinta shrEshThavaada kelsa mattondu hoLiyalla noDi... :-|
@jayashankar
time is precious for all...correct !
innu tamaashe vishya...nimma abhipraayakke naanu oppabahudittu. aadare phone maaduvaaga aa maneya sandarbha hegiratte anta gottiralla...haage avaravara mood saha, nIvu tamashe maadidarU adanna tamasheyaagi sweekarisuva paristhitiyallirtaarO ilvo. aaddarinda eduriddaga maaduva tamaashe chenna, kaaNisikoLLade phone nalli alla annodu nanna abhipraya.
@srikanth:
"shrESHTa "? idU shreshta kelsagaLalli ondaa ? gottE irlilla ! :O
Dear Lakshmi,
Thumba chennagidhe ee topic. Correct, I don't understand y people behave so childish antha. Anthu "Guess madu" anoorige sariyada lekahna.
Padma
ತಮಗೆ ಕೆಲಸವಿಲ್ಲದಿದ್ದರೆ, ಬಿಡುವಿದ್ದರೆ, ಲೋಕಕ್ಕೆಲ್ಲಾ ಬಿಡುವಿದೆ,ಎಂದು ತಿಳಿದು ಹೀಗೆ ಅತೀ ಕ್ಷುಲ್ಲಕವಾಗಿ ಆಡುತ್ತೀವಲ್ಲ ...ನಾವೇಕೆ ಹೀಗೆ ? ..
just time pass ashte....chill maadi..enjoyyyyyyy maadi...
ಆ ರೀತಿ ಗೆಸ್ ಮಾಡಿ ಯಾರ್ ನೋಡೋಣ ಅಂತ ನಂಗೆ ಕೂಡ ಫೋನ್ ಬಂದಿದೆ. ಎಸ್ಸೆಮ್ಮೆಸ್ ಕೂಡ ಬಂದಿದೆ. ನಾನು "ಸಾರಿ, ನಂಗೆ ಟೈಮ್ ಇಲ್ಲ, ಆಲ್ ದಿ ಬೆಸ್ಟ್" ಅಂತ ಹೇಳಿ ಅಲ್ಲಿಗೆ ಮುಗಿಸಿದ್ದೀನಿ.
ನೀನು ಅವರುಗಳಿಗೆ ನಿನ್ನ ಬ್ಲಾಗ್ ಲಿಂಕ್ ಕೊಡ್ಬೋದು ನೋಡು.
@padma :
Thanks aunty ! Thanks for the encouragement. I too don't seem to understand why people behave so immaturely !
@sridhar:
ಕರ್ಮಕಾಂಡ ಪ್ರಭುಗಳೇ....time pass ಆ ? ಕರ್ಮಕಾಂಡ. ಚಿಲ್ಲ್ ಮಾಡ್ಬೇಕಾ ? ಆಗೊಲ್ಲ. ಯಾಕಂದ್ರೆ...ಕೆಲವೊಮ್ಮೆ ಈ ತಮಾಷೆಗಳು "ಚಿಲ್ಲಾತೀತ"ವಾಗಿ ಹೋಗತ್ವೆ.
@ಪರಿಸರಪ್ರೇಮಿ:
ಗುರುಗಳೇ, ಇನ್ನೊಮ್ಮೆ ಯಾರಾದ್ರೂ ಹೀಗೆ ಮಾಡಿದರೆ ನಿಮ್ಮ ಆಜ್ಞೆಯನ್ನು ತಪ್ಪದೇ ಪಾಲಿಸುತ್ತೇನೆ ! thanks for the idea ...ಪಾಠ ಕಲಿಸಿದ ಹಾಗೂ ಆಯ್ತು..ಬ್ಲಾಗ್ ಬಗ್ಗೆ ಹೇಳಿದ ಹಾಗೂ ಆಯ್ತು.ಸೂಪರ್ !
nanna maTTige heLodaadre "Guess?" anta phone-nalle gooTa hoDiyodu kevala aaptavalayadavrige maatra... phone nalli maataaDtiroru yaaru anta tiLdmele guri ne ilde ondu-eradu ghante maataaDokkinta 'guess?' anta heLi kaala haakode melu... enanteera? :)
Yeah. My friend has a special way of replying "Oh No!. I thought u were dead long back."
Seeing your posts ending with Naaveke Heege, reminds me of a hindi song "Mein Aisa Kyun Hoon"
Reminds me of a friend who encountered with such phone calls answers "Hey! You. I thought you were dead long back."
Anyway nice blogs. Creating surprises for the other and thinking ourself to be great and one that who would be remembered by the entire world makes people behave in this fashion
Post a Comment