ಇವತ್ತು ಬೆಳಿಗ್ಗೆ ನನಗೆ ಸ್ನಾತಕೋತ್ತರ ಪದವಿಯ ಕಡೆಯ ಸೆಮೆಸ್ಟೆರ್ ನ ಒಂದು ಪರೀಕ್ಷೆ ಇತ್ತು. ವಿಷಯ ಬೇರೆ ಸಲ್ಪ ಕಷ್ಟಕರವಾಗೇ ಇತ್ತು.ಕಡೆ ನಿಮಿಷದ ತಯಾರಿಗಳು ಭರದಿಂದಲೇ ಸಾಗಿದ್ದವು. ಅದೇನೆ ಆದರೂ ಬೆಳಿಗ್ಗೆ ದಿನ ಪತ್ರಿಕೆಯ ಕಡೆ ಕಣ್ಣು ಹಾಯಿಸದೇ ನಾನು ಸಾಮಾನ್ಯವಾಗಿ ಹೊರಗೆ ಕಾಲಿಡೋದೇ ಇಲ್ಲ. ಎಂದಿನಂತೆ ಇಂದೂ ಸಹ ಮುಖ್ಯಾಂಶಗಳನ್ನು ಓದಿದೆ. ಅದರಲ್ಲಿ ನನ್ನ ಗಮನವನ್ನು ಸೆಳೆದ ವಾರ್ತೆ ಇದು.
ನಾನು ಒಂದು ಎರಡು ನಿಮಿಷ ಹಾಗೆಯೇ ನಿರ್ವಿಣ್ಣಳಾದೆ ! ಅಲ್ಲ....ಅಪಘಾತಕ್ಕೀಡಾದ ಜೀವವೊಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರಬೇಕಾದರೆ ಹಾಗೆಯೇ ಸುಮ್ಮನೇ ನೋಡುತ್ತಿರುವುದರ ಅರ್ಥವೇನು ??? ಎಲ್ಲದಕ್ಕಿಂತ ಜಿಗುಪ್ಸೆ ತರಿಸುವ ವಿಷಯ ಏನಂದರೆ, ಜೀವ ಉಳಿಸಲು ನಾವೇಕೆ ಹಿಂಜರಿಯುತ್ತೇವೆಂದು ಜನರು ನೀಡಿರುವ ಸಮಜಾಯಿಷಿಗಳು ! ಪೋಲೀಸು, ಕಂಪ್ಲೈಂಟು, ಕೋರ್ಟು ಕಚೇರಿಯ ಜಂಜಾಟವಂತೆ..ಕಾರಿನ ಸೀಟು ರಕ್ತಸಿಕ್ತವಾಗುತ್ತವಂತೆ ! ಅಬ್ಬಬ್ಬಾ !!
ಇತ್ತೀಚೆಗೆ ನನಗೊಂದು ಈಮೈಲ್ ಬಂತು. ಇದು ಎಷ್ಟರ ಮಟ್ಟಿಗೆ ನಿಜವೆಂದು ಗೊತ್ತಿಲ್ಲ. ದಯಮಾಡಿ ಯಾರದರೂ ಪರೀಕ್ಷಿಸಿ ಇದರ ಸತ್ಯಾಸತ್ಯತೆಗಳ ಬಗ್ಗೆ ನನಗೆ ಮಾಹಿತಿ ಕೊಡಿ. ಹಾಗೆಯೇ ಇಂತಹ ಈಮೈಲ್ ಗಳ validation ಬಗ್ಗೆ ಸ್ವಲ್ಪ ಮಾಹಿತಿ ನೀಡಿ. ಆ ಫೈಲಿನ ಲಿಂಕ್ ಇಲ್ಲಿದೆ.
ಸಿನೆಮಾದ ಹೀರೋಗಳು ಹಾಕುವ ಬಟ್ಟೆ, ತೊಡುವ ವಾಚು, ನೇತುಹಾಕಿಕೊಳ್ಳುವ ಬ್ಯಾಗುಗಳನ್ನು ಅನುಕರಿಸದೇ, ಅಪಘಾತಕ್ಕೀಡಾದವರನ್ನು ಬದುಕಿಸಲು ಹವಣಿಸುವ ಆ ಬುದ್ಧಿಯನ್ನು ಕಲಿಯುವುದು ಒಳಿತಲ್ಲವೇ ? ಸಿನೆಮಾದಂತೆಯೇ ವೈಭವೀಕೃತವಾಗಿ, ಪವಾಡಸದೃಶ ರೀತಿಯಲ್ಲಿ ಸಹಾಯ ಮಾಡದಿದ್ದರೂ, ಮನುಷ್ಯತ್ವಕ್ಕೆ ತಿಲಾಂಜಲಿ ಬಿಡದೇ ಜೀವ ಉಳಿಸಲು ಪ್ರಯತ್ನ ಪಡಬೇಕಲ್ಲವೇ ?
ಪ್ರಯತ್ನ- ಮೂರಕ್ಷರದ ಪದ. ಇದಕ್ಕೆ ತ್ರಿಮೂರ್ತಿಗಳನ್ನು ಅಲ್ಲಾಡಿಸುವ ದೈತ್ಯ ಶಕ್ತಿಯಿದೆ !
ಸಾಯುತ್ತಿರುವ ಜೀವ ಯಾರದೋ ತಂದೆ, ಇನ್ಯಾರದೋ ತಾಯಿ, ಒಬ್ಬರ ಪತ್ನಿ, ಮಗದೊಬ್ಬರ ಪ್ರೇಯಸಿ, ಒಬ್ಬರ ಅಣ್ಣನೋ, ತಮ್ಮನೋ, ತಂಗಿಯೋ, ತಾತನೋ, ಏನಾದರೂ ಆಗಲಿ ! ಅದು ಆಮೇಲೆ. "ನಮ್ಮಂತೆಯೇ ಅವರು " ಅನ್ನುವ ಪ್ರಜ್ಞೆ ಮೊದಲು ನಮಗೆ ಜಾಗೃತವಾಗಬೇಕು. ನಮ್ಮ ದೌರ್ಭಾಗ್ಯದಿಂದ ನಾವೇ ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದಾಗ ನಮಗೆ ಸಹಾಯ ಮಾಡಲು ಬಾರದೇ ಇದ್ದಾಗ ಪ್ರಾಯಶಃ ನಮಗೆ ಸತ್ಯದ ಅರಿವಾಗಬಹುದೇನೋ ! ಅವರೂ ನಮ್ಮ ಬಂಧುಗಳೇ ಎಂದು ನಮಗೆ ಅರಿವಾಗುವುದು ಯಾವಾಗ ?
ನಾವು ಇನ್ನೊಬ್ಬರಿಗೆ " ಸಾಯಿ...ಇದು ನಿನ್ನ ವಿಧಿ ! " ಎನ್ನಲಾದೀತೆ ? ನಮಗೆ ಬದುಕಲು ಇರುವ ತವಕ ಅವರಿಗೂ ಇಲ್ಲವೇ ? why don't we imagine ourselves in another person's shoes and thinkabout the situation for a nanosecond at least ?
ನಾವೂ ಸಹಾಯ ಹಸ್ತ ಚಾಚಬಾರದೇಕೆ ?
ನಾವೇಕೆ ಹೀಗೆ ?
6 comments:
ಹೇಳಬೇಕಾದದ್ದನ್ನು ಚೆನ್ನಾಗಿ ಹೇಳಿದ್ದೀಯ.
ಅಪಘಾತಗಳ ಸಂದರ್ಭಗಳಲ್ಲಿ ನಾವು ಇವತ್ತು ಇನ್ನೊಬ್ಬರಿಗೆ ಸಹಾಯ ಮಾಡದೇ ಬೇರೊಬ್ಬರಿಂದ ನಮಗೆ ಸಹಾಯ ಆದೀತೆಂದು ನಿರೀಕ್ಷಿಸಲು ಸಾಧ್ಯವೇ ಇಲ್ಲ - ನಮಗೆ ಕೆಡುಕಾದಾಗ.
ನಾನು ಇದುವರೆಗೂ ಸುಮಾರು ಮೂರು ನಾಕು ಸಲ ಈ ರೀತಿ ಅಪಘಾತ ಸನ್ನಿವೇಶದಲ್ಲಿ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡಿದ್ದೇನೆ. ಎಲ್ಲೂ ಪೋಲೀಸು ಕೋರ್ಟು ಕಚೇರಿಯೆಂಬ ಸುಳಿಗೆ ಸಿಲುಕಿಲ್ಲ. ಅದೆಲ್ಲ ಜನರ ಭ್ರಮೆಯಷ್ಟೆ. ಅಪಘಾತಕ್ಕೆ ಕಾರಣರಾದ ಎಲ್ಲರೂ ರಾಜಿಯಾಗಿದ್ದರೆ ಯಾವ ಪೋಲೀಸಾಗಲೀ, ಕೋರ್ಟಾಗಲೀ ಅವಶ್ಯವಿಲ್ಲ.
ನೋಡಿ ಸ್ವಾಮಿ, ನಾವ್ ಇರೋದೇ ಹೀಗೆ!
ಅಪಘಾತಗಳ ಸಂದರ್ಭಗಳಲ್ಲಿ ನಾವು ಇವತ್ತು ಇನ್ನೊಬ್ಬರಿಗೆ ಸಹಾಯ ಮಾಡದೇ ಬೇರೊಬ್ಬರಿಂದ ನಮಗೆ ಸಹಾಯ ಆದೀತೆಂದು ನಿರೀಕ್ಷಿಸಲು ಸಾಧ್ಯವೇ ಇಲ್ಲ - ನಮಗೆ ಕೆಡುಕಾದಾಗ: absolutely !
ನೋಡಿ ಸ್ವಾಮಿ, ನಾವ್ ಇರೋದೇ ಹೀಗೆ!
ನಾನೂ ಹೀಗೆ ನೆ !- ಇದ್ದರೆ ನಿಮ್ಮಂತೆ ಇರಬೇಕು ನೋಡಿ ಗುರುಗಳೇ !
ಪ್ರಯತ್ನ- ಮೂರಕ್ಷರದ ಪದ. ಇದಕ್ಕೆ ತ್ರಿಮೂರ್ತಿಗಳನ್ನು ಅಲ್ಲಾಡಿಸುವ ದೈತ್ಯ ಶಕ್ತಿಯಿದೆ !
...soooper quote -u...
en jangaLo idyaaking aadthaaro??
courte kacheri case antha yaak hing hedruthaaro??
:-( sad to know this incident...
india 'developing' nation aage uLdirokke idoo ondu kaarNa...
nange anniyan movie allidda scene nenpaaytu.. same situation-u..
heegaagbaardittu noDi..
tirutirugi hoTTe horakoLuva mriga-khagakinta
naranu saadhipudEnu? mankutimma
anno saalu nenpaaytu idanna Odi... howdu.. heegella mrigada thara ne vartisidre 'manushya' anniskonDonna 'manushya' anta kariyodralli artha illa ansutte..
Post a Comment