" ನಿಮ್ಮ ಮನೆಯಲ್ಲಿ ಬೊಂಬೆ ಕೂರಿಸಿದ್ದಾರಾ?"
ಈ ಪ್ರಶ್ನೆಯನ್ನು ಸಂಗೀತ ಕಲಿಯಲು ಬರುವ ಪುಟ್ಟ ಮಕ್ಕಳಿಗೆ ಹದಿನೈದು ದಿನಗಳ ಹಿಂದೆ ಕೇಳಿದರು ನಮ್ಮಮ್ಮ. ಅದಕ್ಕೆ ಆ ಮಕ್ಕಳು ಅಷ್ಟೇ ಮುದ್ದಾಗಿ, " what it is teacher ? " ಅಂತ ಕೇಳಿಬಿಟ್ಟರು !!
ಅಮ್ಮ ಸ್ವಲ್ಪ ಚಕಿತಗೊಂಡರಾದರೂ, ಸ್ವಲ್ಪ ಸಾವರಿಸಿಕೊಂಡು, " ನಿಮ್ಮ ಮನೆಯಲ್ಲಿ ಯಾವ ಯಾವ ಬೊಂಬೆಗಳಿವೆ ? " ಅಂತ ಕೇಳಿದರು. ಹೆಣ್ಣು ಮಕ್ಕಳು ಬಹಳ ನೀಟಾಗಿ ಬಾರ್ಬಿ ಡಾಲುಗಳ ಎಲ್ಲಾ ವರ್ಷನ್ನುಗಳನ್ನು ಒಪ್ಪಿಸಿದರು. ಗಂಡು ಮಕ್ಕಳು ಕಾರು, ಏರೋಪ್ಲೇನು, ಪೋಕೆಮಾನು, ಜಿ ಐ ಜೋ ಮುಂತಾದವುಗಳ ಪಟ್ಟಿ ಇಟ್ಟರು. ನಮ್ಮಮ್ಮ ಆಗ ಬೊಂಬೆಗಳ ಕಥೆ ಹೇಳಲು ಶುರುಮಾಡಿದರು.
ಭಾರತದಲ್ಲಿ ಬಹಳ ಹಿಂದೆ ಭೋಜರಾಜ ಎಂಬ ಅರಸು ಇದ್ದನು. ಅವನ ರಾಜ್ಯದ ರಾಜಧಾನಿ ಉಜ್ಜಯಿನಿ ನಗರ. ಅವನ ರಾಜ್ಯದಲ್ಲಿ ಬೊಂಬೆಗಳಿಗೆ ರಾತ್ರಿ ಹೊತ್ತು ಜೀವ ಬರುತ್ತಿತ್ತಂತೆ ! ಅವು ರಾಜನ ವ್ಯಕ್ತಿತ್ವ, ನೀತಿ, ನಿಯಮಗಳು, ರಾಜ್ಯದ ಒಳಿತು ಕೆಡಕುಗಳ ಬಗ್ಗೆ ಚರ್ಚಿಸುತ್ತಿದ್ದವಂತೆ. ಒಂದು ರಾತ್ರಿ ಇದನ್ನು ಸ್ವತಃ ಭೋಜರಾಜನೇ ನೋಡಿದ್ದನಂತೆ. ಆಗ ಬೊಂಬೆಗಳು ಅವನಿಗೆ ಕೆಲವು ರಾಜನೀತಿಗಳನ್ನು ಬೋಧಿಸಿದನೆಂದು ನಮ್ಮಮ್ಮ ಹೇಳಿದರು.
ಮತ್ತೊಂದು ಮಗು , " ನಮಗೆ ಟೀಚರ್ tin soldier ಎಂಬ ಕಾಲು ಮುರಿದ ಸೈನಿಕ ಬೊಂಬೆಯ ಕಥೆ ಹೇಳಿದ್ದಾರೆ. ಈ ಕಥೆ ನೂ ಅದೇ ಥರ ಇದೆ !! "ಅಂತು.
ತತ್ ಕ್ಷಣವೇ ಒಂದು ಮಗು, " ಟೀಚರ್, ನಿಮಗೆ ಈ ಕಥೆ ಯಾರು ಹೇಳಿದ್ದು ? " ಅಂತ ಕೇಳಿತು. ಅದಕ್ಕೆನ್ ನಮ್ಮಮ್ಮ, "ನಮ್ಮಮ್ಮ ಹೇಳಿದ್ದು ! " ಅಂದರು !!
ಅದಕ್ಕೆ ಅಮ್ಮ, " ನಿನ್ನ tin soldier ಕಥೆ ಬರುವ ಸಾವಿರಾರು ವರ್ಷಗಳ ಮುಂಚೆ ಈ ಕಥೆ ಬಂದಿದೆ ಪುಟಾಣಿ ! ಮತ್ತೊಂದು ಕಥೆ ಇದೆ. ರಾಜ ವಿಕ್ರಮಾದಿತ್ಯನ ಕಾಲದಲ್ಲೂ ಬೊಂಬೆಗಳಿಗೆ ಜೀವ ಬಂದು ಅವೂ ವಿಕ್ರಮಾದಿತ್ಯನ ಜೊತೆ ಮಾತಾಡುತ್ತಿದ್ದವು ಎಂದು ಕಥೆ ಇದೆ. "
ಮಕ್ಕಳು ಬಿಟ್ಟ ಕಣ್ಣು ಬಿಟ್ಟುಕೊಂಡು ಕಥೆ ಕೇಳುತ್ತಿದ್ದರು. ಅಮ್ಮ ಮುಂದುವರೆಸಿದರು - " ನಾವು ಚಿಕ್ಕ ಮಕ್ಕಳಾಗಿದ್ದಾಗ ನವರಾತ್ರಿಯಲ್ಲಿ ಸಾಯಂಕಾಲ ಐದು ಘಂಟೆಗೆ ರೆಡಿಯಾಗಿ, ಕ್ಯಾರಿಯರ್ ಒಂದನ್ನು ಹಿಡಿದುಕೊಂಡು, ನಮ್ಮ ಏರಿಯಾದ ಪ್ರತಿಯೊಂದು ಮನೆಗೂ ಹೋಗಿ "ಬೊಂಬೆ ಕೂರ್ಸಿದ್ದೀರಾ ? " ಅಂತ ಕೇಳ್ಕೊಂಡ್ ಹೋಗ್ತಿದ್ವಿ. ಎಲ್ಲರ ಮನೆಯಲ್ಲೂ ಹಾಡು ಹೇಳಿ, ಅವರು ಕೊಟ್ಟ ಬೊಂಬೆ ಬಾಗಿನಗಳನ್ನು ಕ್ಯಾರಿಯರ್ ನಲ್ಲಿ ಹಾಕಿಕೊಂಡು ಬಂದು, ಮನೆಯಲ್ಲಿ ನಾವು ಅಣ್ಣ ತಂಗಿ ಅಕ್ಕ ತಮ್ಮಂದಿರು ಹಂಚಿಕೊಂಡು ತಿನ್ನುತ್ತಿದ್ದೆವು " ಅಂದಾಗ, ಮಕ್ಕಳೆಲ್ಲ ಕಣ್ಣು ಅಗಲಿಸಿದವು !! ಅಮ್ಮ ನಮ್ಮ ಮನೆಯಲ್ಲಿದ್ದ ಬೊಂಬೆಗಳನ್ನು ತೋರಿಸಿ, ಕಥೆ ಹೇಳಿ, ಬೊಂಬೆ ಬಾಗಿನ ಕೊಟ್ಟು ಕಳಿಸಿದರು.
ನಾನು ಯಥಾಪ್ರಕಾರ ಸಾಯಂಕಾಲದ ಕಾಫಿಯನ್ನು ಸವಿಯುತ್ತಾ ಇವರ ಸಂಭಾಷಣೆಯನ್ನು ಮೌನವಾಗಿ ಆಲಿಸುತ್ತಿದ್ದೆ.
ಈಗ ಬೊಂಬೆ ಕೂರಿಸುವ ಸಂಪ್ರದಾಯವೆಲ್ಲ ತೀರ ಕಡಿಮೆಯಾಗಿ ಹೋಗಿದೆ. ಕೆಲವು ಮನೆಗಳಲ್ಲಿ ಬೊಂಬೆಗಳನ್ನು ಹಾಲು ಪೂರ್ತಿ ಕೂರಿಸಿರುತ್ತಾರೆ...ಟಿವಿಯಲ್ಲೂ ನೋಡಿರುತ್ತೀರಿ ಇದನ್ನೆಲ್ಲ ನೀವು. ಆದರೆ ನಮ್ಮ ಮನೆಯಲ್ಲಿ ಅಷ್ಟು ದೊಡ್ಡದಾಗಿ ಕೂರಿಸದಿದ್ದರೂ ಈ ಸಂಪ್ರದಾಯವನ್ನು ಇನ್ನೂ ಪರಿಪಾಲಿಸಲಾಗುತ್ತಿದೆ ಅಂತ ಹೇಳಿಕೊಳ್ಳೋಕೆ ನನಗೊಂಥರಾ ಸಂತೋಷ ಆಗತ್ತೆ. ಚಿಕ್ಕವಯಸ್ಸಿನಲ್ಲಿ ನನ್ನ ಇಬ್ಬರೂ ಅಜ್ಜಿಯರು ನನಗೆ ಒಂದೊಂದೇ ಗೊಂಬೆಯನ್ನು ತೋರಿಸಿ ಕಥೆ ಹೇಳುತ್ತಿದ್ದರು. ಪುರಾಣದ ಕಥೆಗಳೆಲ್ಲ ನನಗೆ ಗೊತ್ತಾಗುತ್ತಿದ್ದೇ ನವರಾತ್ರಿಯಲ್ಲಿ. ಪ್ರತಿ ದಿನ ಹೇಳುತ್ತಿದ್ದ ಕಥೆಗಳಿಗಿಂತಾ ನನಗೆ ಈ ಬೊಂಬೆ ತೋರಿಸಿ ಹೇಳುತ್ತಿದ್ದ ಕಥೆಗಳು ತುಂಬಾ ಕುತೂಹಲಕಾರಿ, ಆಕರ್ಷಕ ಅನ್ನಿಸುತ್ತಿದ್ದವು. ಅದೊಂದು ರೀತಿಯ ನೀತಿಪಾಠವಾಗಿತ್ತು ನನಗೆ. ಈಗ....
ನಮ್ಮ ಮನೆಗೆ ಬೊಂಬೆ ನೋಡಲು ಒಬ್ಬಾಕೆ ಬಂದಿದ್ದರು.ಏನೂ ಖಾಯಿಲೆ ಇರದವರು. ಅವರ ಮನೆಯಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಆಳು, ಬಂಗಲೆಯಂಥಾ ಮನೆ. ಅವರಿಗೆ ಟಿವಿಯಲ್ಲಿನ ಸೀರಿಯಲ್ಲು ನೋಡಲು ಸಮಯ ಸಾಲದು ಅಂತ ಬಂದು ಅಳಲು ತೋಡಿಕೊಳ್ಳುತ್ತಿದ್ದರು. ನಾವು ನಾಲ್ಕು ದಿನದಿಂದ ಅಟ್ಟದ ಮೇಲಿಂದ ಬೊಂಬೆಗಳನ್ನು ಕೆಳಗಿಳಿಸಿಕೊಂಡು, ಅವುಗಳ ಪ್ಯಾಕ್ ಬಿಚ್ಚಿ, ಸ್ಟೆಪ್ಪುಗಳಿಗೆ ನಮ್ಮ ಸ್ಟಡಿ ಟೇಬಲ್ಲುಗಳನ್ನು ಎಳೆದು, ಪಂಚೆ ಹೊದಿಸಿ, ಎಲ್ಲಾ ಮಾಡಿದ್ದನ್ನು ನೋಡಿ ಕೇಳಿದರು... "ಏನಮ್ಮ, ನಿನಗೆಷ್ಟು ಟೈಮ್ ಇರತ್ತೆ ? ಟಿವಿಯಲ್ಲಿನ ಸೀರಿಯಲ್ಲು ನೋಡಲು ಸಮಯ ಸಾಲದು ನನಗೆ...ನೀವು ಮೂರು ಜನ ಇಷ್ಟೆಲ್ಲಾ ಮಾಡಿದ್ದೀರ... ನನಗೆ ನೋಡಿ, ಟೈಮ್ ಆಗೋದೇ ಇಲ್ಲ! "
ನಾನು ಹೇಳಬೇಕೆಂದಿದ್ದೆ " ಇದಕ್ಕೆ ವಯಸ್ಸು, ಟೈಮಿನ ನಿರ್ಬಂಧವಿಲ್ಲ. ಇಂಟೆರೆಸ್ಟಿದ್ದರೆ ಟೈಮ್ ತಂತಾನೇ ಆಗತ್ತೆ " ಅಂತ. ಆದರೆ, ನಾನು " ಕೊಲ್ಲುವ ಮೌನದ " ಬಗ್ಗೆ ರಿಸರ್ಚು ಮಾಡುತ್ತಿದ್ದೆಯಾದ್ದರಿಂದ, ಮಾತಾಡಲಿಲ್ಲ. ಸುಮ್ಮನೆ ನಕ್ಕೆ.
ಮತ್ತೊಂದು ಆಶ್ಚರ್ಯಕರ ವಿಷಯ ಎಂದರೆ, ಇದಕ್ಕೆ ಪದ್ಧತಿ ಇರಬೇಕಂತೆ ! ಅಲ್ಲ, ನಮ್ಮ ಸೃಜನಸ್ಜೀಲತೆ ಮತ್ತು ಕಲಾನೈಪುಣ್ಯತೆಗೂ, ಪದ್ಧತಿಗೂ ಎನು ಸಂಬಂಧ ? ಒಂಭತ್ತು ದಿನಗಳು ಹೊಸ ಹೊಸ ತಿಂಡಿ, ಹೊಸ ಜನ, ಹೊಸ ಉತ್ಸಾಹಕ್ಕೆ ಪದ್ಧತಿಯ ಬಂಧನವೇಕೆ ? ಪದ್ಧತಿ ಇಲ್ಲದವರು ಬೆಳೆಸಿಕೊಳ್ಳಲು ಅವಕಾಶ ಇಲ್ಲ ಯಾಕೆ ?
ಮಾಡಲಾಗದ ಪ್ರತಿಯೊಂದು ಕೆಲಸಕ್ಕೂ ನಾವು ಕಾರಣ ಕೋಟಿಗಟ್ಟಲೆ ಕೊಡಬಹುದು. ಆದರೆ ಅದು genuine ಆಗಿರಬೇಕಲ್ಲವೇ? ನಮ್ಮ ಬ್ಯುಸಿ ಜೀವನದಲ್ಲಿ ಇಂಥಾ ಹಬ್ಬಗಳು ಒಂದು change ಅಲ್ಲವೇ? We need a break, we are tensed, we need a change ಅಂತೆಲ್ಲಾ ಗೋಳಾಡಿಕೊಂಡು, ನಮ್ಮ ಕ್ರಿಯಾಶೀಲತೆ, ಆಸಕ್ತಿ ಮತ್ತು ಕೌಶಲ್ಯಗಳನ್ನು ಪ್ರದರ್ಶನ ಮಾಡುವ ಸಮಯ ಬಂದಾಗ "No time! " ಎಂದು ಸಿಕ್ಕ ಅವಕಾಶವನ್ನೂ ಕಳೆದುಕೊಳ್ಳುತ್ತೀವಲ್ಲಾ... ನಾವೇಕೆ ಹೀಗೆ ?
ಇಂದಿಗೆ ನಾವೇಕೆ ಹೀಗೆ ಬ್ಲಾಗ್ ಶುರುವಾಗಿ ಒಂದು ವರ್ಷವಾಯಿತು. ತಿಂಗಳಿಗೊಂದು ಪೋಸ್ಟ್ ಹಾಕುತ್ತಿದ್ದೆ, ನೀವೂ ಓದಿ, ಕಮೆಂಟಿಸಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದೀರಿ. ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ.
ನಮ್ಮ ಮನೆಯಲ್ಲಿ ಈ ಬಾರಿ ದಸರೆಯಲ್ಲಿ ಕೂರಿಸಿದ ಬೊಂಬೆಗಳ ವೀಡಿಯೋ ಇಲ್ಲಿ ಹಾಕುತ್ತಿದ್ದೇನೆ. ಸಾಮಾನ್ಯವಾಗಿ ನಾವು ಹಾಲು ಪೂರ್ತಿ ಕೂರಿಸುತ್ತಿದ್ದೆವು. ಆದರೆ, ನಮಗೆ ಈ ಬಾರಿ ಸ್ಟೆಪ್ಪುಗಳ ಅಭಾವವಾಯ್ತು ಸ್ವಲ್ಪ. ಎರಡು ಅಟ್ಟಗಳ ಮೇಲಿನ ಬೊಂಬೆಗಳನ್ನ ಕೆಳಗಿಳಿಸಲಿಲ್ಲ ಅದಕ್ಕೆ. ಈ ಬಾರಿ ಇಷ್ಟೇ ಕೂರಿಸಲು ಸಾಧ್ಯವಾಗಿದ್ದು. ರಾಗಿ ಪೈರು ಬೆಳೆಸಿ ಪಾರ್ಕ್ ಕೂಡಾ ಮಾಡಲಾಗಲಿಲ್ಲ ಎಂಬುದು ಮತ್ತೊಂದು ಬೇಜಾರು. ನೋಡಿ ನಮ್ಮ ಮನೆಯ ಬೊಂಬೆಗಳನ್ನ...ಹೇಗಿವೆ ಅಂತ ಹೇಳಿ.
ಆಮೇಲೆ, ಬೊಂಬೆ ಬಾಗಿನದ ಫೋಟೋ ಕೂಡಾ ಹಾಕುತ್ತಿದ್ದೇನೆ, ನೋಡಿ, ತಿಂದಿದ್ದೀನಿ ಅಂತ ಅಂದುಕೊಂಡು ಬಿಡಿ ! :-) ಹಾ...ಯಾರು ಮಾತಾಡಿರೋದು ವೀಡಿಯೋ ಲಿ ಅಂತ ನೀವು ಯೋಚನೆ ಮಾಡಬೇಕಿಲ್ಲ, ವಿಡಿಯೋ ತೆಗೆಯಲು ನನ್ನ ರಿಸರ್ಚಿಗೆ ಒಂದು ಬ್ರೇಕ್ ಕೊಟ್ಟಿದ್ದೆ :-)
12 comments:
ಲೈಕ್‍ವೈಸ್, ನಂಗ್ಯಾರೋ ಹೇಳಿದ್ರು, ಗೊಂಬೆ ಯಾಕೆ ಕೂರಿಸ್ತಾರೆ ಅಂದ್ರೆ...:
"ಇದರಿಂದಾಗಿ ಗೊಂಬೆ ಮಾಡುವವರಿಗೆ, ಕಲಾವಿದರಿಗೆ, ಅವರ ಕಲೆಗೆ ಬೇಡಿಕೆ-ಬೆಲೆ ಬರುತ್ತದೆ. ಹಾಗಾಗಿ, ಹಿಂದಿನ ಕಾಲದ ಅರಸರು ಇಂತಹ ಸಂಪ್ರದಾಯಗಳನ್ನ ಜಾರಿಗೆ ತಂದ್ರು. ತಮ್ಮ ದೇಶದ ಎಲ್ಲಾ ರೀತಿಯ ಪ್ರಜಾವರ್ಗಕ್ಕೂ ಅನುಕೂಲವಾಗಬೇಕು ಎಂಬುದು ಅವರ ಉದ್ಧೇಶವಾಗಿತ್ತು. ಗಣಪತಿ ಕೂರಿಸೋದ್ರಿಂದ ಮಣ್ಣಲ್ಲಿ ಗಣಪತಿ ಮಾಡೋನಿಗೆ ಊಟ ಸಿಗೊತ್ತೆ, ದೀಪಾವಳೀಲಿ ಪಟಾಕಿ ತಗೊಂಡ್ರೆ ಪಟಾಕಿ ಒಳಗೆ ಮದ್ದು ತುಂಬಿದವನ ಹೊಟ್ಟೆ ತುಂಬುತ್ತೆ, ದಸರಾದಲ್ಲಿ ಕೂರಿಸೋಕೆ ಗೊಂಬೆ ಕೊಳ್ಳುವುದರಿಂದ ನಾವ್ಯಾರೂ ನೋಡಿರದ ಚನ್ನಪಟ್ಟಣದ ಅನಾಮಿಕ ಗೊಂಬೆ ಮಾಡುವವ ಹೊಸ ಬಟ್ಟೆ ಕೊಳ್ತಾನೆ.. ಹೀಗೆ ನಾವು ನಮಗೇ ಗೊತ್ತಿಲ್ಲದೇ ಮತ್ಯಾರಿಗೋ ಪೂರಕವಾಗಿರ್ತೇವೆ" ಅಂತ.
ಅವರು ಹೇಳುವಾಗ 'ಹೌದೌದು' ಅನ್ನಿಸಿತ್ತು.. :-)
ಈ ವರ್ಷ ಆಗ್ಲಿಲ್ಲ; ಮುಂದಿನ್ ವರ್ಷ ಗೊಂಬೆ ಕೂರ್ಸಿದಾಗ ನಿಮ್ಮನೆಗೆ ಬಂದೇ ಬರ್ತೀನಿ, ಆಯ್ತಾ? ;)
ಹಾಳು ಮೂಳು ತಿನ್ನೋಕೆ ಒಂದು ನೆವ. ಇರಲಿ.
ಒಂದು ವರ್ಷ ಆಗೋಯ್ತಾ ಇಷ್ಟ್ ಬೇಗ??
hats of for your collection !!!
and arrangement and also for naration :-)
keep it up...
Laughing Bhudda elli??? Sakathagide video.. :-)
ಲೇಖನ ಚೆನ್ನಾಗಿದೆ. ಖುಷಿಯಾಯಿತು.
ನನಗನ್ನಿಸಿದಂತೆ ಈ ಕಥೆಗಳು, ಈ ಸಂಪ್ರದಾಯಗಳು ಹುಟ್ಟಿಕೊಂಡಿದ್ದು ನಮ್ಮೊಳಗಿನ ಜೀವನ ಪ್ರೀತಿಯ ಒರತೆ ಬತ್ತಿ ಹೋಗದಿರಲೆಂದು. ಈ ಹಬ್ಬಗಳ ಹೆಸರಿನಲ್ಲಿ ಒರತೆಯೊಳು ತುಂಬಿರಬಹುದಾದ "ಹೂಳು' ತೆಗೆಯೋ ಕೆಲಸ ಮಾಡ್ತೇವೆ. ಮತ್ತೆ ಒರತೆ ಹರಿಯುತ್ತದೆ, ಮತ್ತೊಂದು ಹಬ್ಬ ಬರುವವರೆಗೆ. ಅಂದ ಹಾಗೆ ವಿಡೀಯೋ ನೋಡಿದೆವು. ಗೊಂಬೆಗಳು ಚೆನ್ನಾಗಿವೆ.
ನಮಸ್ಕಾರ
ನಾವಡ
ಶುಭಾಶಯಗಳು :)
ಚೆನ್ನಾಗಿದೆ ಲೇಖನ ಹಾಗು ಬೊಂಬೆಗಳ ವೀಡಿಯೋ.
i must appreciate the interest that you have shown in propagating our culture
ನನಗೊಂದಿಷ್ಟು ಡೌಟ್ಸು...
೧) ಇನ್ನರ್ ಸರ್ಕಲ್ ನಲ್ಲಿ ಕೃಷ್ಣನ ಜೀವನ ಚರಿತ್ರೆಯ ಮುಖ್ಯ ಘಟ್ಟಗಳನ್ನ "ಕೂರಿಸಿ" ಮಾಡಿರೋ ಗೊಂಬೆಯ ಮಧ್ಯೆ, "ಆದರ್ಶ ದಂಪತಿಗಳ" ನಡುವೆ ಕೈ ಹಾಕ್ದವ್ರು ನೀವೇನಾ?
೨) ನೀವೂ ಲೇಡೀಸ್ ಕ್ಲಬ್ ಮೆಂಬರ್ರಾ?
೩) ವೀಣೆ, ತಂಬೂರಿ, ಹಾರ್ಮೋನಿಯಮ್ - ಇವೆಲ್ಲ ಗೊಂಬೆಗಳಾ?
ಅಂದ ಹಾಗೆ, ಇದನ್ನು ಒಂದ್ ಸಲ ನೋಡಿ...
@sushrutha :
neevu heLodrallu satya ide :-) enaadru aagli, bomebgaLanna idodu ontharaa khushi.
last line nalli maadiro promise na keep up maadtiro ilvo nodtini mundin sala :-)
@parisarapremi:
:-) hoon...ondh varsha beg bega aagiytu. naan heLde surya chandrarige...nidhaanakke hograppa...nim speed keep up maadakke aagalla nan kaili anta...hopeless fellows avru...bega bega odbitru :-(
@prawin udupa :
Thanks :-)
@radhe :
laughing buddha na keLAge ittidde...bandavrige torsana anta..mele tarodu martode:( sorry!
@navada :
thank you sir. nimma maatu tumbaa nija.
@antarvani:
dhanyavadagaLu.
@srikanth:
Thanks for your appreciation.
@harish:
೧) ಇನ್ನರ್ ಸರ್ಕಲ್ ನಲ್ಲಿ ಕೃಷ್ಣನ ಜೀವನ ಚರಿತ್ರೆಯ ಮುಖ್ಯ ಘಟ್ಟಗಳನ್ನ "ಕೂರಿಸಿ" ಮಾಡಿರೋ ಗೊಂಬೆಯ ಮಧ್ಯೆ, "ಆದರ್ಶ ದಂಪತಿಗಳ" ನಡುವೆ ಕೈ ಹಾಕ್ದವ್ರು ನೀವೇನಾ? hoon.
೨) ನೀವೂ ಲೇಡೀಸ್ ಕ್ಲಬ್ ಮೆಂಬರ್ರಾ? hoon.
೩) ವೀಣೆ, ತಂಬೂರಿ, ಹಾರ್ಮೋನಿಯಮ್ - ಇವೆಲ್ಲ ಗೊಂಬೆಗಳಾ? uhu.
last line ---> :-) :-)
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.ವರ್ಷದ ಬ್ಲಾಗ್ಗೆ ಮತ್ತು ಬ್ಲಾಗ್ ಒಡತಿಗೆ ಹರ್ಷದ ಅಭಿನಂದನೆಗಳು. ಗೊಂಬೆ ಕೂರಿಸಿರೋದು ತುಂಬಾ ಚೆನ್ನಾಗಿದೆ. ನಿಮ್ಮ ನಿರೂಪಣೆ ಇನ್ನೂ ಚೆನ್ನಾಗಿದೆ.ವೀಣೆ ನುಡಿಸುತ್ತೇನೆ ಅಂತೀರಿ. ಖಂಡಿತ ಹಾಡ್ತೀರಿ ಅನಿಸುತ್ತೆ .ನಿಮ್ಮ ಧ್ವನಿ ತುಂಬಾಚೆನ್ನಾಗಿದೆ. ಬರೆಯುತ್ತಿರಿ.ಬರ್ತಾ ಇರುತ್ತೇನೆ.
your energy is mind boggling..this is a general comment to all your posts.
ಖುಶಿಯಾಯ್ತು....
peace,love and light.
ನಿಮ್ಮ ಕಲಾಭಿರುಚಿಗೆ ನನ್ನ ಅಭಿನಂದನೆ. ಮಾಲ್ಗುಡಿ ಡೇಸ್ನ ನವರಾತ್ರಿ ಕಥೆ ನೆನಪಿಗೆ ಬಂತು. ನಿಮ್ಮಜ್ಜಿ ನಿಮಗೆ ಒಂದೊಂದೇ ಬೊಂಬೆ ತಗೊಂಡು ಕಥೆ ಹೇಳ್ತಿದ್ದಿದ್ದನ್ನ ಕೇಳಿ ಹೊಟ್ಟೆ ಕಿಚ್ಚಾಯ್ತು. ನಾನು ಹುಟ್ಟಿದ ಸ್ವಲ್ಪ ವರ್ಷದಲ್ಲೇ ಅವ್ರು ತೀರಿ ಹೋದ್ರು ಮತ್ತೆ ನಮ್ಮನೇಲಿ ಬೊಂಬೇನೂ ಇಡೊಲ್ಲ.
ಅಂದಹಾಗೇ ನಾವೇನೂ ಅರಸಿಕರಲ್ಲ :) ನಂಮನೇಲಿ ಚೆಂದದ ತೋಟ ಇದೆ ನಂಗೆ ಅದೇ ಬೊಂಬೆ..
Post a Comment