Tuesday, October 21, 2008

ತಮಾಷೆಗೆ ಮಿತಿಯಿಲ್ಲವೇ ?

ನೀವು ಈ ಪೋಸ್ಟನ್ನು ಓದಿದ ಮೇಲೆ " ಈ ಹುಡುಗಿ ಗೆ sense of humor ಸ್ವಲ್ಪ ಕಡಿಮೆ, She does not know how to take issues in good spirits " ಅಂತ ಅಂದುಕೊಂಡರೂ ಪರ್ವಾಗಿಲ್ಲ. ಆದರೆ ಇದು ನಿಜವಾಗಿಯೂ ಬೇಜಾರು ತರಿಸುವಂಥ ವಿಷಯ.

ಮೋಟೋರೋಲಾ ದ ಹೊಸ ಮೊಬೈಲ್ ಫೋನಿನ ಜಾಹೀರಾತನ್ನು ಈಗಾಗಲೇ ನೀವೆಲ್ಲರೂ ನೋಡಿರುತ್ತೀರಿ. ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗುರುಗಳ ವ್ಯಂಗ್ಯಚಿತ್ರವನ್ನು ಫೋನಿನಲ್ಲಿ ಬಿಡಿಸಿ ಈಮೈಲ್ ಮಾಡುವ ಈ ಜಾಹೀರಾತು ಹುಡುಗರಿಗೆ ಈಗ ಅಧ್ಯಾಪಕರನ್ನು ಆಡಿಕೊಳ್ಳುವ ಹೊಸ ಆಯಾಮವನ್ನು ಪರಿಚಯ ಮಾಡಿಸುತ್ತಿದೆ. ನಾವೂ ಕಾಲೇಜಿನಲ್ಲಿ ಓದಿದವರೇ. ಲೆಕ್ಚರರ್ ಗಳನ್ನು ನಾವೂ ಆಡಿಕೊಳ್ಳುತ್ತಿದ್ದೆವು. ಇಲ್ಲವೆಂದು ನಾನು ಖಂಡಿತಾ ಹೇಳುವುದಿಲ್ಲ. ಆದರೆ ಅವರ ಮೇಲಿನ ಗೌರವ ನಮಗೆ ಬೆಟ್ಟದಷ್ಟಿದೆ. ಗುರುಗಳನ್ನು ನಾವೆಂದಿಗೂ ಈ ಪರಿಯ ಅವಮಾನ ಮಾಡಿರಲಿಲ್ಲ. ಬದುಕಿನ ಪಾಠ ಕಲಿಸುವ ಗುರುಗಳಿಗೆ ಈ ಪರಿಯ ಅವಮಾನವೇ ?ತಮಾಷೆಗೆ ಮಿತಿಯಿಲ್ಲವೇ ? ಸದಾ ಗೌರವಿಸಿ, ಅವರು ಹೇಳಿಕೊಟ್ಟ ಆದರ್ಶಗಳನ್ನು ಪಾಲಿಸಬೇಕಾದ ಗುರುಗಳನ್ನು ಈ ತರಹ ಅವಹೇಳನ ಮಾಡಿರುವುದು ಸರಿಯೇ ?


ನಿಜವಾಗಿಯೂ ಈ ಜಾಹಿರಾತಿನವರು ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಬೇಕಿದ್ದಿದ್ದರೆ ಬಹಳ ಸ್ಪೀಡಾಗಿ ನೋಟ್ಸನ್ನು ದಿಕ್ಟೇಟ್ ಮಾಡುತ್ತಿದ್ದ ಲೆಕ್ಚರರ್ ನ ನೋಟ್ಸನ್ನು ಫೋನಲ್ಲಿ ಗೀಚಿಕೊಂಡು, ನೋಟ್ಸ್ ನಲ್ಲಿ ನೀಟಾಗಿ ಕಾಪಿ ಮಾಡಿ ಮಾರನೆಯ ದಿನ ಸೈ ಅನ್ನಿಸಿಕೊಂಡು ರಹಸ್ಯವಾಗಿ ತನ್ನ ಮೊಬೈಲ್ ಫೋನಿನ ಸಮರ್ಥ ಉಪಯೋಗವನ್ನು ತೋರಿಸಬಹುದಿತ್ತು.ಇವ ಬರೆದ ವ್ಯಂಗ್ಯ ಚಿತ್ರಕ್ಕಿಂತ ಉಪಯುಕ್ತವಾದ ಕೆಲಸವಲ್ಲವೇ ಅದು? ನಾನು ನನ್ನ ಎಮ್.ಎಸ್ಸಿಯ ಅವಧಿಯಲ್ಲಿ ನಡೆದ ಎಲ್ಲ ಅತಿಥಿ ಭಾಷಣಗಳನ್ನು ರೆಕಾರ್ಡ್ ಮಾಡಿ ಎಕ್ಸಾಮಿಗೆ ಅದನ್ನು ಕೇಳಿಕೊಂಡು ನೋಟ್ಸ್ ಮಾಡಿ ಓದಿದ್ದೆ. ಯಾಕಂದರೆ ನಮಗೆ ಪವರ್ ಪಾಯಿಂಟ್ ನಲ್ಲಿ ಪಾಠಗಳು ಸಾಗುತ್ತಿದ್ದವು. ನಂತರ ಅವುಗಳನ್ನು ನಮಗೆ ಈಮೈಲ್ ಮಾಡಲಾಗುತ್ತಿತ್ತು. ಈಮೈಲ್ ನಲ್ಲಿ ಪಾಠ ಓದಿ, ಮೀಡಿಯಾ ಪ್ಲೇಯರ್ ನಲ್ಲಿ ಪಾಠ ಕೇಳುತ್ತಿದ್ದೆ.

ಮೊಬೈಲ್ ತರಬಾರದೆಂದು ಈಗೀಗ ಶಾಲಾಕಾಲೇಜುಗಳಲ್ಲಿ ಆಜ್ಞೆ ಇದೆಯಾದರೂ ಈಗಿನ ಮಕ್ಕಳು ಈ ಜಾಹಿರಾತನ್ನು ನೋಡಿದ್ದೇ ಇದೇ ಮೊಬೈಲನ್ನು ತೆಗೆಸಿಕೊಡಬೇಕೆಂದು ತಂದೆ ತಾಯಿರನ್ನು ಪೀಡಿಸಲು ಶುರುಮಾಡುತ್ತಾರೆ. ತಾಯ್ತಂದೆಯರೂ ಕೂಡಾ ಇವರ ಹಠದ ಮುಂದೆ ನಿಸ್ಸಹಾಯಕರಾಗುತ್ತಾರೆ. ಮೊಬೈಲ್ ತಂದು ಕೈಗಿಡಬೇಕಾಗುತ್ತದೆ. ಇವರು ಕದ್ದು ಮುಚ್ಚಿ ಅದನ್ನು ಶಾಲೆಗೆ ತಗೆದುಕೊಂಡು ಹೋಗಿ, ಸಿಕ್ಕಿಹಾಕಿಕೊಂಡು ಕಡೆಗೆ ಪರದಾಡುತ್ತಾರೆ. ಬೇಕೇ ಇವೆಲ್ಲಾ ?

ಈಗಾಗಲೇ ಚಲನಚಿತ್ರಗಳು ಮಕ್ಕಳಲ್ಲಿ ಗುರುಗಳ ಬಗ್ಗೆಗಿನ ಭಾವನೆಯನ್ನು ಬೇಕಾದಷ್ಟು ಬಿಗಡಾಯಿಸುವ ಮಹಾನ್ ಪುಣ್ಯಕಾರ್ಯ ಮಾಡಿದೆ. ಇದೊಂದು ಬಾಕಿಯಿತ್ತು ಅಂತ ಕಾಣತ್ತೆ.

ಎಲ್ಲರ ಜೀವನದಲ್ಲಿ ಗುರುಶಿಷ್ಯ ಸಂಬಂಧ ಚೆನ್ನಾಗಿಲ್ಲದಿರಬಹುದು. ನಾನಿದನ್ನು ವಿಸ್ತರಿಸಿ ಹೇಳುವ ಅವಶ್ಯಕತೆ ಇಲ್ಲವೆಂದುಕೊಳ್ಳುತ್ತೇನೆ. ಆದರೆ ಎಲ್ಲರ ಜೀವನದಲ್ಲೂ "favorite teacher" ಅನ್ನುವವರೊಬ್ಬರಾದರೂ ಇರುತ್ತಾರಲ್ಲವೇ ? ಈ ತರಹದ ಜಾಹಿರಾತನ್ನು ಮಾಡುವ ಮುನ್ನ Ad director ಗೆ ತನ್ನ Director ಗುರುಗಳು, ಪಾತ್ರಧಾರಿಗಳಿಗೆ ತಮ್ಮ ಗುರುಗಳ ನೆನಪಾಗದಿರುವುದು ವಿಪರ್ಯಾಸ.

ಈಗಿನ ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಾಪಕರ ಮೇಲೆ ಗೌರವವೇ ಇಲ್ಲವೆಂದು ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿರುವ ನಮ್ಮ ಸೋದರತ್ತೆ ಮೊನ್ನೆ ಅಳಲು ತೋಡಿಕೊಳ್ಳುತ್ತಿದ್ದರು.ನನ್ನ ಗೆಳತಿಯರು ಈಗ ಕಾಲೇಜುಗಳಲ್ಲಿ ಅಧ್ಯಾಪಕಿಯರು. ಅವರ ಅಳಲೂ ಇದೇ.ಅಧ್ಯಾಪಕರು ಸ್ನೇಹಿತರಂತೆ ವರ್ತಿಸಬೇಕಾದದ್ದು ನಿಜವೇ ಆದರೂ, ಆ ಸ್ನೇಹಕ್ಕೆ ಒಂದು ಬಿಗಿ, ಹಿಡಿತ ಇರಬೇಕು. ಸಲುಗೆ ಕಡಿಮೆ, ಗೌರವ ಹೆಚ್ಚಿರಬೇಕು. ಆದರಯುಕ್ತ ಅಭಿಮಾನವಿರಬೇಕು. ಎಲ್ಲರನ್ನು ಸ್ನೇಹಿತರಾಗಿಯೇ ಕಾಣುವುದಾದರೆ ಅಪ್ಪ, ಅಮ್ಮ, ಗುರು ಅನ್ನುವ ನಿರ್ದಿಷ್ಟ ಸಂಬಂಧಗಳು ಇರುತ್ತಿದ್ದವೇ ?

ಇಂದು ಸಂಬಂಧಗಳೆಲ್ಲಾ ಹಗ್ಗಾಗುತ್ತಿವೆ, ಗೌರವವನ್ನು ಗಾಳಿಗೆ ತೂರಿಬಿಡಲಾಗಿದೆ. ಯಾಕೆ ಹೀಗೆ ?

29 comments:

ಅಂತರ್ವಾಣಿ said...

ಆ ಫೋನಿನಲ್ಲಿ MS Paint ಥರ applicaton ಇದೆ ಅನ್ನಿಸುತ್ತೆ.
ಹೊಸದನ್ನು ಕೊಡೋದಕ್ಕೆ ಈ ರೀತಿ Design ಮಾಡಿರುತ್ತಾರೆ ಮಾ. ಯಾರನ್ನೂ ನೋಯಿಸುದಕ್ಕೂ ಅಲ್ಲ.. ಮಕ್ಕಳು ತಂದೆ ತಾಯಿ ಬಳಿ ಹಠ ಮಾಡಿ ತೆಗೆಸಿಕೊಳ್ಳಲಿ ಅನ್ನುವ ಆಸೆಯಿಂದಲೂ ಅಲ್ಲ.

Parisarapremi said...

ತಮಾಷೆ ಶಬ್ದವನ್ನು ತಮ + ಆಶೆ ಅಂತ ಬಿಡಿಸಿಕೋ, ಉತ್ತರ ಸಿಗುತ್ತೆ ನಿನಗೆ..

ಈ ಲೇಖನದಲ್ಲಿ ನೀವು favourite ಅನ್ನೋ ಆಂಗ್ಲ ಶಬ್ದವನ್ನು favorite ಎಂದು ಬರೆದಿರುವುದರಿಂದ ನೀವು ಅಮೇರಿಕದ ಪರ ಎಂದು ನಿರೂಪಿಸಿದ್ದೀರ. ಇದು ಅಸಹನೀಯ ಖೇದಕರ ಸಂಗತಿ. ;-)

Srikanth - ಶ್ರೀಕಾಂತ said...

ಈ ಹುಡುಗಿ ಗೆ sense of humor ಸ್ವಲ್ಪ ಕಡಿಮೆ, She does not know how to take issues in good spirits. :-)

ವಾಸ್ತವ ಎಂದರೆ, ನೀವು ಉಲ್ಲೇಖಿಸಿರುವ ಮೋಟರೋಲಾ ಅಡ್ವಟೈಸ್ಮೆಂಟನ್ನು ನಾನು ನೋಡೇ ಇಲ್ಲ. ಅಧ್ಯಾಪಕರಿಗೆ ವಿದ್ಯಾರ್ಥಿಗಳು ಈಚೆಗೆ ಗೌರವ ಯಾಕೆ ಕೊಡುವುದಿಲ್ಲ ಎಂಬುದರ ಬಗ್ಗೆ ನನ್ನ ಅನಿಸಿಕೆಯನ್ನು ಇನ್ಯಾವಾಗಲಾದರೂ ಹೇಳುತ್ತೇನೆ. ಇಲ್ಲಿ ಬೇಡ. ಇಲ್ಲಿ ಅದನ್ನೆಲ್ಲಾ ಹೇಳಿದರೆ, ನನಗೂ ಸೆನ್ಸ್ ಆಫ್ ಹ್ಯೂಮರ್ ಇಲ್ಲ ಅಂತಲೋ ಜಾಸ್ತಿ ಅಂತಲೋ ಜನ ನನ್ನ ಬೈಕೋತಾರೆ - ನಾನು ನಿಮ್ಮನ್ನು ಬೈಕೊಂಡಂತೆ :-)

NilGiri said...

ಈಗಿನ ಹುಡುಗ/ಹುಡುಗಿಯರು ( ಎಲ್ಲರೂ ಅಂತಲ್ಲಾ!) ಅಪ್ಪ, ಅಮ್ಮನಿಗೇ ತಿರುಗಿ ಬೀಳುತ್ತಾರೆ. ಇನ್ನು ಗುರುಗಳ ಮಾತು ದೂರವೇ ಉಳಿಯಿತು. " ಗುರುವೇ ನಮಃ " ಬರಬರುತ್ತಾ " ಗುರುವೇನು ಮಹಾ?" ಆಗುತ್ತಿರುವುದು ನಿಜಕ್ಕೂ ದುರದೃಷ್ಟಕರ.

Srinivasa Rajan (Aniruddha Bhattaraka) said...

ದಾಸರು ಹಾಡಿಲ್ಲವೇ? "ಪಾಪ ಕರ್ಮಕ್ಕೆ ಮನಸೋಲೋದೀ ಕಲಿಗಾಲ" ಅಂತ? ಇದಾದ್ರೂ ಓಕೆ.. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಕೆಲವು ಸಹಪಾಠಿಗಳು ಒಂದು ಪ್ಲಾನ್ ಮಾಡ್ತಿದ್ರು.. ಏನಕ್ಕೆ ಅಂತೀರ? ನಮ್ಮ ಕನ್ನಡ ಮೇಷ್ಟ್ರನ್ನ ಎಲ್ಲಾದ್ರೂ ದೂರ ಕರೆದುಕೊಂಡು ಹೋಗಿ ಬಡಿಯೋ ಪ್ಲಾನು!!! ಯಾಕೆ? ಅವರು ತರಗತಿಯಲ್ಲಿ ಶಿಸ್ತು ಪಾಲನೆ ಮಾಡಕ್ಕೆ ಒತ್ತಾಯ ಮಾಡಿದ್ರು, ಮಾತು ಕೇಳದ ಒಬ್ಬನನ್ನ ತರಾಟೆಗೆ ತೆಗೆದುಕೊಂಡ್ರು ಅಂತ!!! ನಂಬ್ತೀರಾ? ಇಂಥವರನ್ನ ದೇವರೇ ಕಾಪಾಡಬೇಕು!

ಸಂದೀಪ್ ಕಾಮತ್ said...

ಯಾರೋ ಒಬ್ರು ಸಿನೆಮಾ ಡೈರೆಕ್ಟರಿಗೆ ’ಸಾರ್ ನಿಮ್ಮ ಚಿತ್ರಗಳನ್ನು ನೋಡಿ ಜನರು ಕೆಡಲ್ವೇ ’ ಅಂದಿದ್ದಕ್ಕೆ ಅವ್ರು’ ನಮ್ಮ ಸಿನೆಮಾ ನೋಡಿ ಜನರು ಅದನ್ನು ಅನುಸರಿಸಲ್ಲ ,ಜನರು ಮಾಡೋದನ್ನು ನೋಡಿ ನಾವು ಸಿನೆಮಾ ಮಾಡ್ತಾ ಇದ್ದೀವಿ ’ ಅಂದ್ರಂತೆ!
ಅದೆ ರೀತಿ ಹುಡುಗರು ಅಧ್ಯಾಪರನ್ನು ಈ ಜಾಹೀರಾತು ನೋಡಿ ಲೇವಡಿ ಮಾಡ್ತಾರೆ ಅನ್ನೋದು ತಪ್ಪಾಗುತ್ತೆ.


ಕಾಲ ಬದಲಾಗ್ತಾ ಇದೆ ನಾವೂ ಬದಲಾಗ್ತ ಇದ್ದೀವಿ ಅಷ್ಟೆ.

ಸಂದೀಪ್ ಕಾಮತ್ said...

ಇನ್ನೊಂದು ವಿಷ್ಯ ! ನಿಮ್ಮ ಅಧ್ಯಾಪಕಿ ಗೆಳತಿಗೆ!
ನನಗೂ ಒಬ್ಬಳು ಲೆಕ್ಚರರ್ ಗೆಳತಿ ಇದ್ಲು.ಆಕೇನೂ ಯಾವಾಗ್ಲೂ ಅಂತಾ ಇದ್ಲು teaching is a noble profession ಆದ್ರೆ ಈಗ ಯಾರೂ ರೆಸ್ಪೆಕ್ಟ್ ಕೊಡಲ್ಲ ಅಂತ.ಆಗ ನಾನು ಅವಳಿಗೆ’ ಅದೆಲ್ಲಾ ಹಿಂದಿನ ಕಾಲದಲ್ಲಿ೧ ಈಗ ಬೇರೆ ಏನೂ ಕೆಲಸ ಸಿಕ್ಕಿಲ್ಲ ಅಂದ್ರೆ ವಿಧಿ ಇಲ್ಲದೆ ಲೆಕ್ಚರರ್ ಆಗಿ ಸೇರ್ಕೋತಾರೆ ’ ಅಂದಿದ್ದಕ್ಕೆ ಸಿಕ್ಕಪಟ್ಟೆ ರೇಗಾಡಿದ್ಲು.
ಆಮೇಲೆ ಅವಳಿಗೆ ಸಾಫ್ಟ್ವೇರ್ ಕಂಪೆನಿಯಲ್ಲಿ ಆಫರ್ ಬಂತು.
ಆಗ ’ನೋಬಲ್(?)’ ಪ್ರೊಫೆಶನ್ ಬಿಟ್ಟು ಗ್ಲೋಬಲ್ ಪ್ರೊಫೆಶನ್ ಗೆ ಸೇರ್ಕೊಂಡು ಬಿಟ್ಲು.
ಎಲ್ಲಿ ಹೋಯ್ತು ನಿನ್ನ ಸಿದ್ಧಾಂತಗಳು ಅಂದ್ರೆ ಇನ್ನೂ ಉತ್ತರಿಸಿಲ್ಲ.
ನಿಮಗೇನಾದ್ರೂ ಗೊತ್ತಾ ಉತ್ತರ?

Anonymous said...

Ene heLi,
paatha maadodu annodu kuri kaayo kelsa annothara anta nanna shikshaka geleya helLa irtane..!

Sridhar Raju said...

oLLe adverstisement -u...oLLe tamaashi...

Lakshmi Shashidhar Chaitanya said...

@antarvani :

irbahudu.aadre advertisements irode aase huttisoke alva ? makkalu easy yaagi victimise aagtaare inthavikke. aadrinda, ad navaru olle reetiyalli asse huttisalu saadhyave illave annuvudu prashne. yaara manassannu noyisuvudakkalla endu avarige annisiddare ( appi tappi ) idakkinta chennaagi
maadabahudittalva ad na?

@parisarapremi

artha aaytu...jotege bejaaru aaytu.

ondu korike:

"america para" ennuva goobeyannu nanna taleya mele koorisuva badalu blogger spell check mele koorisabekaagi praarthane.


@srikanth:

baikondra ? sari. parvaagilla.


@nilgiri:

namaskaara. naaveke heege ge swaagatha. nimma maatannu naanu anumodisuttene.


@gandabherunda:

devre kaapadbeku nija...aadre inthaddannu tadeyuva manushya prayatna nu jotegirbekalva ?


@sandeep kamath :

cinema li saamaanya janaru maadodanna vaibhavikarstaare anno abhipraaya nandu. kaala badlaagtaayide, oppide. aadare badalaavane hesrinalli aadarshagaLu shithila aagtirodu duranta.

nimma aa lecturer geLati bagge keLI nanage nanna gelatiyobbala bagge heLbeku anta anstide. avlu nanna degree classmate. teacher aagbeku anta ne pana tottu, degree li college top maadi, M.sc li gold medals tagondlu. eega college nalli mathematics lecturer aagi, ella students hatra " our favourite teacher" anta anskondidaale. nanna innoblu friend-u avala tande software company ge serko andaaga galaate maadi, serkolde, college ondaralli physics lecturer aagidaale.

anthavara madhyadalli inthavaru irtaare.


@punchline:

kuri kaayo kelsa sulabha alla. jotege kuri kaayo kelsada jawabdaari nu.

@sridhar:

karmakaanda prabhugale,enu tochde iddare "odiruve" anta comment maadi. sumne artha aagde iro bhaashelella bardre nange kashta agatte.

ಶ್ರೀನಿಧಿ.ಡಿ.ಎಸ್ said...

odiddene.:)

nice write up.

ಚಂದ್ರಕಾಂತ ಎಸ್ said...

ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ನಿಜ.ಜಾಹೀರಾತುಗಳಿಂದ ಜನರು ದಾರಿ ತಪ್ಪುತ್ತಾರೆ ಅನ್ನೋದು ನಿಜ. ಇತ್ತೀಚೆಗೆ ದಿನಸಿ ಅಮ್ಗಡಿಯವರೊಬ್ಬರು ತಮ್ಮ ಅಳಲು ತೋಡಿಕೊಂಡರು. ಏನಪ್ಪಾ ಅಂದರೆ ಒಂದು product ಜಾಹೀರಾತು ಬಂದ ಕೂಡಲೇ ಗ್ರಾಹಕರು ಅದನ್ನು ತರಿಸಿಕೊಡುವಂತೆ ಕೇಳುತ್ತಾರಂತೆ. ಅದನ್ನು ಕೆಲವೇ ದಿನಗಳಲ್ಲಿ ತರಿಸಿಕೊಟ್ಟರೆ ಮತ್ತೊಂದು ಹೊಸಾ ಜಾಹೀರಾತು ನೋಡಿ ಅದು ಬೇಕು ಇದು ಬೇಡ ಅನ್ನುತ್ತಾರಂತೆ!!

Harisha - ಹರೀಶ said...

ಎಲ್ಲಾ ಓಕೆ.. ಇಂಗ್ಲಿಷ್ ಕಮೆಂಟ್ ಯಾಕೆ? ನಾವೇಕೆ ಹೀಗೆ??

ಕನ್ನಡವನ್ನ ಇಂಗ್ಲಿಷ್ ಅಕ್ಷರದಲ್ಲಿ ಬರೆದರೆ ಓದಕ್ಕೆ ಕಷ್ಟ.. ಒಂಥರಾ ಹಿಂಸೆ ಕೂಡ!

Unknown said...

Eshtondu peetike
Lecturer aago plan idya?

Anveshi said...

ನಮಗೂ ಸೆನ್ಸೇ ಇಲ್ಲ ಅಂತ ಎಲ್ಲರೂ ಹೇಳುವ ಮೊದಲೇ ಅರಿತುಕೊಂಡಿದ್ದೇವೆ.


ಎಷ್ಟೊಂದು ಬ್ಲಾಗುಗಳನ್ನು ನಿಭಾಯಿಸ್ತಿದೀರಾ....

ದೀವಳಿಗೆ ಹಬ್ಬದ ಶುಭಾಶಯಗಳು

Anonymous said...

ಈ ಪೋಸ್ಟನ್ನು ಓದಿದ ಮೇಲೆ "ಈ ಹುಡುಗಿ ಗೆ sense of humor ಸ್ವಲ್ಪ jaasthi" ansthu.. ;-)

Lakshmi Shashidhar Chaitanya said...

@ಚಂದ್ರಕಾಂತ್ :

ನಮಸ್ಕಾರ, ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿಪ್ರಯವೂ ಸತ್ಯ. ನಾನೂ ದಿನಸಿ ಅಂಗಡಿಗಳಲ್ಲಿ ಇಂತ ಪೀಕಲಾಟಗಳನ್ನು ನೋಡಿದ್ದೇನೆ.

@ಹರೀಶ್:

ಕ್ಷಮಿಸಿ, ಬರಹ ಯಾಕೋ ಆವತ್ತು ಕೈಕೊಟ್ಟಿತ್ತು.

@lost :

ನಮಸ್ಕಾರ. ಹೌದು...ಅಧ್ಯಾಪಕಿ ಆಗುವ ಯೋಚನೆ ಇದೆ.

@ಅಸತ್ಯ ಅನ್ವೇಷಿ:

ನಮಗೂ ಸೆನ್ಸೇ ಇಲ್ಲ ಅಂತ ಎಲ್ಲರೂ ಹೇಳುವ ಮೊದಲೇ ಅರಿತುಕೊಂಡಿದ್ದೇವೆ.---> ಭೇಷ್! ನೀವು "ಪ್ರಜ್ಞಾವಂತರು" :) :) :)


ಎಷ್ಟೊಂದು ಬ್ಲಾಗುಗಳನ್ನು ನಿಭಾಯಿಸ್ತಿದೀರಾ....---> ಎಷ್ಟೊಂದು ಅಲ್ಲ...ಸದ್ಯಕ್ಕೆ ಏಳೇ ಏಳು ಬ್ಲಾಗುಗಳು.

ದೀವಳಿಗೆ ಹಬ್ಬದ ಶುಭಾಶಯಗಳು ----> ನಿಮಗೂ ಸಹ.

@ರಾಧ:

:) :)...ಹೌದಾ ?

ಚಂದ್ರಕಾಂತ ಎಸ್ said...

ಲಕ್ಷ್ಮಿಯವರೆ, ನಾನು ಚಂದ್ರಕಾಂತ್ ಅಲ್ಲ ಚಂದ್ರಕಾಂತ!ನನ್ನ ಹೆಸರಿನಿಂದ ನಾನು ಎದುರಿಸಿದ ಪೀಕಲಾಟವನ್ನು ಶೀಘ್ರದಲ್ಲೇ ನನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡುವೆ:)

Lakshmi Shashidhar Chaitanya said...

@ಚಂದ್ರಕಾಂತ :

ನನ್ನ ಬರಹ ಸಾಫ್ಟ್ ವೇರಿಂದ ಆದ ಈ ಅನಾಹುತಕ್ಕೆ ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ.

ಚಂದ್ರಕಾಂತ ಎಸ್ said...

ಲಕ್ಷ್ಮಿಯವರೆ ಕ್ಷಮೆ ಕೇಳುವಂತದ್ದು ಏನೂ ಆಗಿಲ್ಲ. ಅನಾಹುತವೂ ಆಗಿಲ್ಲ.ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಸಾರಿ.

Lakshmi Shashidhar Chaitanya said...

ಅಯ್ಯೋ...ನಾನು ನಿಮಗೆ ನೋವಾಗಿದ್ದರೆ ಸಾರಿ ಎಂದೆ. ಬದಲಾಗಿ ನೀವೇ ನನಗೆ ಸಾರಿ ಕೇಳುತ್ತಿದ್ದೀರಲ್ಲ! ದಯವಿಟ್ಟು ಸಾರಿ ಎಲ್ಲ ಕೇಳಬೇಡಿ.

ನಿಮ್ಮ ಬ್ಲಾಗ್ ನೋಡಿದೆ. ನಿಮ್ಮ ಶೈಲಿ ಹೃದ್ಯವಾಗಿದೆ.

ಚಂದ್ರಕಾಂತ ಎಸ್ said...

ನನ್ನ ಬ್ಲಾಗ್ ಬಗ್ಗೆ ಒಳ್ಳೆಯ ಅಭಿಪ್ರಾಯ ಕೊಟ್ಟಿದ್ದಕ್ಕೆ ಧನ್ಯವಾದಗಳು.

Shree said...

ಹಹ್ಹಹ್ಹಾ..! ಲಕ್ಷ್ಮೀ ಪುಟ್ಟಿ :) ಕೆಡುವ ಮಕ್ಕಳು ಹೇಗಿದ್ದರೂ ಕೆಡುತ್ತಾರೆ. ಸರಿ-ತಪ್ಪು ಗೊತ್ತಿರುವ ಮಕ್ಕಳು ತಪ್ಪು ಕಡಿಮೆ ಮಾಡುತ್ತಾರೆ, ಅಥವಾ ತಾವು ತಪ್ಪು ಮಾಡುವಾಗ ಅದು ತಪ್ಪು ಅಂತಲಾದರೂ ಅರ್ಥ ಮಾಡಿಕೊಳ್ಳುತ್ತಾರೆ... ಕೆಟ್ಟದನ್ನು ನೋಡಿಯೂ ತಾವು ಕೆಡದಿರುವ ಹಾಗೆ ತಮ್ಮನ್ನು ತಾವು ಕಾಪಾಡಿಕೊಳ್ಳುವುದನ್ನು ಮಕ್ಕಳಿಗೆ ದೊಡ್ಡವರು ಹೇಳಿಕೊಡಬೇಕು. ನೀನು ದೊಡ್ಡವಳಾದಾಗ ಗೊತ್ತಾಗುತ್ತೆ ಬಿಡು :) ಈಗಿನ್ನೂ ಹಾಯಾಗಿರೋ ಕಾಲ, ಹಾಯಾಗಿರು... :)

Unknown said...

ಲೇಖನ ಅರ್ಥಪೂರ್ಣ ಮತ್ತು ಸಮಯಪೂರ್ಣವಾಗಿದೆ

ಈಗಿನ ಮಕ್ಕಳು ಬದಲಾಗುತ್ತಿದ್ದಾರೆ - ನಮ್ಮ ಕಾಲದಲ್ಲಿ ಹೀಗಿರಲಿಲ್ಲ :(
ಹಿಂದೆ ಇದೇ ಮಾತುಗಳನ್ನು ನಮ್ಮ ಹಿರಿಯರು ನಮ್ಮನ್ನು ಮೂದಲಿಸಲು ಹೇಳುತ್ತಿದ್ದರು
ಮುಂದೆ ಇದೇ ಮಾತುಗಳನ್ನು ನಮ್ಮ ಕಿರಿಯರು ಹೇಳುತ್ತಾರೇನೋ?

Dr U B Pavanaja said...

ಲೇಖನ ಅರ್ಥಪೂರ್ಣವಾಗಿದೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಹಲವು ಜಾಹೀರಾತುಗಳು ಕೇವಲ ಅಸಂಬದ್ಧ ಮಾತ್ರವಲ್ಲ, ಸಮಾಜವಿರೋಧಿಯೂ ಆಗಿವೆ. ಆದರೆ ನಾನು ಇವುಗಳೆಲ್ಲವುಗಳಿಂದ ಬಹುಪಾಲು ಮುಕ್ತ. ಯಾಕೆಂದರೆ ನಮ್ಮ ಮನೆಯಲ್ಲಿ ಯಾವುದೇ ಖಾಸಗಿ ಟಿವಿ ಚಾನೆಲ್ ಇಲ್ಲ. ನಾವು ನೋಡುವುದು ಏನಿದ್ದರೂ ಸರಕಾರಿ "ಚಂದನ".

ಅಂದ ಹಾಗೆ ಕ್ಯಾಮರಾ ಇರುವ ಮೊಬೈಲ್ ಫೋನ್‌ನ ಒಂದು ಉಪಯೋಗ (ವಿದ್ಯಾರ್ಥಿಗಳಿಗೆ)-ನೋಟೀಸ್ ಬೋರ್ಡ್‌ನಲ್ಲಿ ಹಾಕಿರುವ ವೇಳಾಪಟ್ಟಿಯನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಅದನ್ನೆ ಬಳಸುವುದು. ಈಗ ಹಿಂದಿನ ಕಾಲದಂತೆ ಯಾವ ವಿದ್ಯಾರ್ಥಿಯೂ ಅದನ್ನು ಪುಸ್ತಕದಲ್ಲಿ ಬರೆದುಕೊಳ್ಳುವುದಿಲ್ಲ.

ಜಂಗಮವಾಣಿಯ ಇನ್ನೂ ಹಲವಾರು ಉಪಯೋಗಗಳ ಬಗ್ಗೆ ನಾನೂ ಈಗಾಗಲೇ ಬರೆದಿದ್ದೇನೆ.

-ಪವನಜ

Sushrutha Dodderi said...

ಹೆಹೆಹೇ! ಟೇಕಿಟೀಸಿ ಮ್ಯಾನ್.. ಯಾವ್ಯಾವುದೋ ವಿಷಯಗಳ ಬಗ್ಗೆ ಆ ಪರಿ ಸೀರಿಯಸ್ ಡಿಸ್ಕಶನ್ಸ್ ನಡೆದರೇನೇ ಯಾರೂ ತಲೆಗೆ ತಗೊಳಲ್ಲ, ಪ್ರಪಂಚ ಬದಲಾಗೊಲ್ಲ; ಇನ್ನು ಅಡ್ವರ್ಟೈಸ್‍ಮೆಂಟ್‍ಗಳೆಲ್ಲಾ ಜನರನ್ನ ಬದಲಿಸೊತ್ತಾ? ಮಕ್ಕಳ ಮೇಲೂ ಅಷ್ಟೆಲ್ಲಾ ಭಯ ಪಡೋಷ್ಟು ಪರಿಣಾಮ ಬೀರೊತ್ತೆ ಅನ್ಸೊಲ್ಲ ನಂಗೆ.. ಹಾಗೆ ನೋಡಿದ್ರೆ ಆ ಥರದ ಸುಮಾರು ಯಾಡ್‍ಗಳು ಇವೆ..

ಮತ್ತೆ, ಗುರುಗಳೂ ಗೌರವ ಹುಟ್ಟಿಸೋ ಹಾಗಿರ್ಬೇಕಾಗತ್ತೆ.. ಆಗ ವಿದ್ಯಾರ್ಥಿಗಳು ಇಂಟರೆಸ್ಟ್ ಇಟ್ಟು ಪಾಠ ಕೇಳ್ತಾರೆ, ಕ್ಲಾಸಿನಲ್ಲಿ ಆಟ ಆಡಲ್ಲ.

YAKSHA said...

File a case against Motorola in the High court?

Shrinidhi Hande said...

ಮೆ೦ಟೋಸ್ ಮಿ೦ಟ್ ನ ಜಾಹೀರಾತು ಕೂಡ ಇದೇ ವರ್ಗಕ್ಕೆ ಸೇರತ್ತೆ

Anonymous said...

TV li baro idonde advertisement yaake ninna kennGanige guriaaGideyo nA ariyalaare!
aadre 'STUDENTS' teachers ge respect kodthidda kAla gALige thurkond hortogide..
adu innu swlpa uLkondide annodAdre nimmanthvrinda ma!


by d way naanu E advertisement nOdeilla..:(