Sunday, October 26, 2008

ದೀಪದ ಹಬ್ಬದ ಶುಭಾಶಯ


ಅಡೋಬ್ ಫೋಟೋಶಾಪ್ ನಲ್ಲಿ (for the first time ) ನಾನೆ ಮಾಡಿದ ಶುಭಾಶಯ ಪತ್ರ. ಇಲ್ಲಿವರ್ಗೂ ಅದನ್ನ ಓಪನ್ನು ಮಾಡಿರಲಿಲ್ಲ. ಕನ್ನಡ ಶುಭಾಶಯಪತ್ರಗಳನ್ನು ಹುಡುಕಿದೆ...ಅದನ್ನ ಹುಡುಕುವುದರ ಬದಲು ನಾನೇ ಮಾಡಿದರೆ ಆ ಖುಶಿ ಬೇರೆ ಅನ್ನಿಸಿತು. ಅದಕ್ಕೆ ಐದು ಘಂಟೆಗಳ ಕಾಲ ಕಷ್ಟ ಪಟ್ಟು, ಫೋಟೋಶಾಪ್ ಉಪಯೋಗಿಸುವುದನ್ನು ತಕ್ಕ ಮಟ್ಟಿಗೆ ಕಲಿತು ಇದನ್ನ ಮಾಡಿದ್ದೇನೆ. ನಿಮಗೆಲ್ಲರಿಗೂ ಈ ದೀಪದ ಹಬ್ಬ ಸುಖ ಸಂತೋಷ, ನೆಮ್ಮದಿ, ಆಯಸ್ಸು, ಆರೋಗ್ಯ ಹಾಗೂ ನೆಮ್ಮದಿಯನ್ನು ಕೊಟ್ಟು ಬಾಳಿನಲ್ಲಿ ಬೆಳಕು ಮೂಡಿಸಲಿ ಎಂದು ಹಾರೈಸುತ್ತೇನೆ.

ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು.

8 comments:

ಚಂದ್ರಕಾಂತ ಎಸ್ said...

ತುಂಬಾ ಸುಂದರವಾಗಿದೆ.

ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು

ನಿಮಗೂ ಹಬ್ಬದ ಶುಭ ಹಾರೈಕೆಗಳು

ಅಂತರ್ವಾಣಿ said...

ನಿನಗೂ, ನಿಮ್ಮ ಮನೆಯವರಿಗೂ ಶುಭಾಶಗಳು :)
ಚೆನ್ನಾಗಿದೆ ಶುಭಾಶಯ ಪತ್ರ.. ನಿನ್ನ Default ವಾಕ್ಯ ಕಾಣಿಸುತ್ತಾಯಿಲ್ಲ...
ನಿನ್ನ ಪರವಾಗಿ ನಾನು ಸೇರಿಸಿದರೆ ತಪ್ಪಿಲ್ಲ ಅನ್ನಿಸುತ್ತೆ...

"ಪಟಾಕಿ ಹೊಡೆದು ವಾಯು ಮಾಲಿನ್ಯ ಮಾಡ್ತೀವಲ್ಲಾ... ನಾವೇಕೆ ಹೀಗೆ?"

ಅಂತರ್ವಾಣಿ said...

ಶೀರ್ಷಿಕೆ ಕೊಡಮ್ಮ ಮೊದಲು

Prasad said...

ಧನ್ಯವಾದಗಳು...ನಿಮಗೂ ದೀಪಾವಳಿಯ ಶುಭ ಹಾರೈಕೆಗಳು!
ನಿಮ್ಮ ಬ್ಲಾಗನ್ನು ಇ೦ದು ಪ್ರಥಮ ಬಾರಿಗೆ ಓದಿದೆ.ಚೆನ್ನಾಗಿ ಬರೆಯುತ್ತೀರಾ..ಹೀಗೆಯೆ ಮು೦ದುವರೆಯಲಿ.
ಸಾಧ್ಯವಾದಲ್ಲಿ http://prasad-nirchal.blogspot.com/ ಗೆ ಒಮ್ಮೆ ಬ೦ದು ಹೋಗಿ.

Jagali bhaagavata said...

ಚಂದವಿದೆ. ನಿನಗೂ ಮತ್ತು ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ಜ್ಞಾನಜ್ಯೋತಿ ಬೆಳಗುತ್ತಿರಲಿ. ನಿನ್ನಿಂದ ಇನ್ನಷ್ಟು ವಿಜ್ಞಾನ ಸಂಬಂಧಿ ಲೇಖನಗಳು ಬರಲಿ :-)

Lakshmi Shashidhar Chaitanya said...

ಚಂದ್ರಕಾಂತ:

ಧನ್ಯವಾದಗಳು :-)

ಅಂತರ್ವಾಣಿ:

ಧನ್ಯವಾದಗಳು. ನಾನು ಒಂದಾದ್ರು "questionless" post ಇರಲಿ ಅಂದುಕೊಂಡಿದ್ದೆ.ನೀವು ನನ್ನ Default question ಅನ್ನು ಕೇಳಿದ್ದು ತಪ್ಪೇನಿಲ್ಲ ಬಿಡಿ.ಆಮೇಲೆ, ಶೀರ್ಷಿಕೆ ಹಾಕಿರುವೆ.

ಪ್ರಸಾದ್:

ನಮಸ್ಕಾರ. ನನ್ನ ಬ್ಲಾಗ್ ಗೆ ಸ್ವಾಗತ.ನಿಮ್ಮ ಹಾರೈಕೆ ಹಾಗೂ ಅಭಿಪ್ರಾಯಗಳಿಗೆ ಧನ್ಯವಾದಗಳು.ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟೆ. ಸಹಜವಾಗಿ ಬರೆಯುತ್ತೀರ. ಚೆನ್ನಾಗಿದೆ. ಹೀಗೆ ಬರೆಯುತ್ತಿರಿ ನೀವೂನೂ..

ಭಾಗವತರು:

ನೀವು ಕಮೆಂಟ್ ಮಾಡಿದಿರಿ, ಬೆಂಗಳೂರಿನಲ್ಲಿ ಮಳೆ ನಿಂತುಹೋಯ್ತು ;)ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.ವಿಜ್ಞಾನದ ಲೇಖನಗಳು ಬರತ್ವೆ...ಪ್ರಾಮಿಸ್!

bhadra said...

ಬಹಳ ಚಂದದ ಶುಭಾಶಯ ಪತ್ರ - ನಿಮಗೂ ಮತ್ತು ನಿಮ್ಮ ಕುಟುಂಬದವರೆಲ್ಲರಿಗೂ ದೀಪಾವಳಿಯ ಶುಭ ಆಶಯಗಳು

Lakshmi Shashidhar Chaitanya said...

@srinivas

ಧನ್ಯವಾದಗಳು. ನಿಮಗೂ ಮತ್ತು ನಿಮ್ಮ ಮನೆಯವರಿಗೂ ಸಹ ದೀಪಾವಳಿಯ ಶುಭ ಹಾರೈಕೆಗಳು.