Monday, December 31, 2007

ಹೊಸ ವರ್ಷದ ಆಗಮನ (?)

ಭೂಮಿ ಸೂರ್ಯನ ಸುತ್ತ 2007 ಸಲ ಗಿರ್ಕಿ ಹೊಡೆದಿದ್ದಾಯಿತು ಎಂದು ಸಂಭ್ರಸುತ್ತಿದೆ ಲೋಕ!(ನಾವು ಎಣಿಸಲು ಪ್ರಾರಂಭಿಸಿದಮೇಲೆ ಅಂತ ಇಟ್ಕೊಳ್ಳಿ. ನಿಜವಾಗಿಯೂ ಹೇಳಬೇಕೆಂದರೆ ಭೂಮಿ ಕಳೆದ ೧೪ ದಶಲಕ್ಷ ವರ್ಷಗಳಿಂದ ಗಿರ್ಕಿ ಹೊಡೆಯುತ್ತಲೇ ಇದೆ !) ಇವತ್ತು ಡಿಸೆಂಬರ್ 31.ಎಲ್ಲರು ಇವತ್ತು ರಾತ್ರಿ ಹನ್ನೆರಡರ ವರೆಗೂ ಕಣ್ಣಿಗೆ ಎಣ್ಣೆ ( ಕೆಲವರು ಹೊಟ್ಟೆಗೂ ಎಣ್ಣೆ )ಬಿಟ್ಟುಕೊಂಡು, ಹೊಸ ವರ್ಷ ಬಂತೆಂದು ಕಿರುಚಾಡಿ, ಪಟಾಕಿ ಹೊಡೆದು, (ಪ್ರಾಣಿಗಳನ್ನು ದಿಗಿಲುಗೊಳಿಸಿ,ಎಬ್ಬಿಸಿ ) ಸಂತೋಷಪಡುವ ಪ್ರತೀತಿಯಿದೆ. ಹೊಸ ವರ್ಷ ಬಂತೆಂದು ಸಂತೋಷ ಪಡುವುದು, ಸಂಭ್ರಮಿಸುವುದು ಇದರ ಉದ್ದೇಶಗಳೆಂದು ಬಾಹ್ಯವಾಗಿ ಕಂಡರೂ,ಅರ್ಧರಾತ್ರಿಯ ಈ ಆಡಂಬರದ ಆಚರಣೆ, ಅರಚಾಟದ ನಿಜವಾದ ಕಾರಣ ನನಗಂತೂ ಇನ್ನೂ ಸ್ಪಷವಾಗಿಲ್ಲ. ಬುದ್ಧಿವಂತರು ಈ ಹೊಸ ವರ್ಷವು ಗ್ರೆಗರಿಯನ್ ಪದ್ಧತಿಯದ್ದು ಎಂದು ಹೇಳಿ,12.00 ಗಂಟೆ ಇಂದ ಬೆಳಗ್ಗೆ ಎಂಬುದು ಕಾಲ ನಿಯಮವೆಂದು ಹೇಳುವರು. ಎಲ್ಲವನ್ನು ಒಪ್ಪೋಣ. ಆದರೂ ಈ ನಿಶಾಚರರ ಸಂಸ್ಕೃತಿಯ ಬಗ್ಗೆ ನನಗೆ ಹೆಚ್ಚು ಸಮ್ಮತಿಯಿಲ್ಲ. ರಾತ್ರಿ ಹನ್ನೆರಡು ಗಂಟೆಯ ಬದಲು ಸೂರ್ಯನ ಪ್ರಥಮ ಉಷಾಕಿರಣದ ದರ್ಶನದ ನಂತರ ಆಚರಿಸಬಾರದೇಕೆ ? ಸೂರ್ಯನ ಉದಯ ಭೂಮಿಯಲ್ಲಿ ಒಂದೆ ಸಮನೆ ಆಗುವುದಿಲ್ಲ ಎಂದು ಅಲ್ಲಗಳೆಯುವ ಮಹಾನುಭಾವರು 12.00 ಗಂಟೆಯೂ ಭೂಮಿಯಲ್ಲಿ ಸಮನಾಗಿಲ್ಲವೆಂದು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಮಾನವನಿಗೆ ಜ್ಞಾನಸದೃಶ ಆದಿತ್ಯನಿಗಿಂತ ಅಜ್ಞಾನರೂಪ ಅಂಧಕಾರವೇ ಹೆಚ್ಚು ಪ್ರಿಯವೋ ?

ಇನ್ನು ಹೊಸ ವರ್ಷದ ಸಂಕಲ್ಪ (New year resolution).ಅಲ್ಲ, ನಾವು ಯಾವ ದಿನವನ್ನು ಆಧಾರವನ್ನಾಗಿ ಇಟ್ಟುಕೊಂಡರೂ 365 ದಿನಗಳಾದ ಮೇಲೆ ಅದು ಹೊಸ ವರ್ಷವೇ !ನನ್ನ ಪ್ರಕಾರ ಪ್ರತಿ ದಿನವೂ ಹೊಸ ವರ್ಷದ ಆರಂಭವೇ !! ನಾವು ಪ್ರತಿದಿನವನ್ನು ಒಂದು ಹೊಸ ಸಂಕಲ್ಪದೊಂದಿಗೆ ಆರಂಭಿಸಬೇಕು. ಅದು ನಮ್ಮ ಉನ್ನತಿ ಮತ್ತು ಲೋಕದ ಉದ್ಧಾರದ ಉದ್ದೇಶವನ್ನು ಹೊಂದಿರಬೇಕು. ಇಂತಹ ಸಂಕಲ್ಪ ಮಾಡಲು ಜನವರಿ ಒಂದರವರೆಗೂ ಕಾಯಬೇಕೆ ? ಒಳ್ಳೆ ಕಾರ್ಯಗಳನ್ನು ಮುಂದೂಡುವ ಅವಶ್ಯಕತೆಯಿದೆಯೇ ? ಅಥವಾ ಇದನ್ನು ನಾವು ಅನಿವಾರ್ಯವನ್ನಾಗಿ ಮಾಡಿಕೊಂಡಿದ್ದೇವೆಯೇ ?

ಇರಲಿ, ನನ್ನ ಈ ಜಿಜ್ಞಾಸೆಗಳ ನಡುವೆಯೇ ಹೊತ್ತು ಜಾರುತ್ತಿದೆ.ಆದರೆ ನಾಳಿನ ಹೊಸ ದಿನದ ಆರಂಭಕ್ಕೆ ನಾನೇನೂ ಕೌತುಕಳಾಗಿಲ್ಲ. ಭೂಮಿಯಲ್ಲಿನ ಋತುಮಾನಗಳ, ವಿದ್ಯಮಾನಗಳ ಲೆಕ್ಕ ಇಡುವವರಿಗೆ ವರ್ಷಗಳ ಎಣಿಕೆ ಬೇಕು. ಆದರೆ ಭೂಮಿಯ ಜೊತೆಗೇ ಸುತ್ತುವವರಿಗೆ ಪ್ರತಿಯೊಂದು ದಿನವೂ ಹೊಸದೇ !! ನಾವೂ ಭೂಮಿಯೊಡನೆಯೇ ಸುತ್ತುತ್ತಿದ್ದೇವೆ ಎಂಬುದು ನಮಗೆ ಗೋಚರವಾದರೆ ಸಾಕು.ಆಗ ಈ ಡಂಬಾಚರಣೆಗಳೆಲ್ಲ ನಿರರ್ಥಕವೆಂದು ತಿಳಿಯಲು ಹೆಚ್ಚು ಸಮಯ ಬೇಕಿಲ್ಲ !

7 comments:

ಅಂತರ್ವಾಣಿ said...

chennagide nimma lEKhana.

Parisarapremi said...

ಮುಹೂರ್ತಗಳನ್ನು ತೊರೆದರೆ ಮುಂದುವರೆದುಬಿಡುತ್ತಾರೆಂಬ ಭಯ ಇದೆ ನಮ್ಮ ಜನಕ್ಕೆ.

Sridhar Raju said...

ಎಲ್ಲರು ಇವತ್ತು ರಾತ್ರಿ ಹನ್ನೆರಡರ ವರೆಗೂ ಕಣ್ಣಿಗೆ ಎಣ್ಣೆ ( ಕೆಲವರು ಹೊಟ್ಟೆಗೂ ಎಣ್ಣೆ )ಬಿಟ್ಟುಕೊಂಡು, ಹೊಸ ವರ್ಷ ಬಂತೆಂದು ಕಿರುಚಾಡಿ, ಪಟಾಕಿ ಹೊಡೆದು, (ಪ್ರಾಣಿಗಳನ್ನು ದಿಗಿಲುಗೊಳಿಸಿ,ಎಬ್ಬಿಸಿ ) ಸಂತೋಷಪಡುವ ಪ್ರತೀತಿಯಿದೆ...

he he he ee melina lines chennagive... hmmmm.. nimma prashnegaLu chintanaarha..nanna abhipraaya idhu..ee reetiya sambhramaacharaNegaLu ondu nepa ashTe...timepass anthaaralla aathara .santosha(!!), chill aagakke.. adondu saNNa paridi itkondu eethara maadthaare janagaLu...naavu ee aacharaNegaLna bramhaanDada level nalli nodidre naav maadodu crap ansatte....relax aagakke ondu nepa ee hosa varsha aacharaNe..jana avravrige iShTa aago reeti aacharsthaare...yaargu tondre kodadidre saaku....kelvu sala hard core reality ge iLeebaardu ree....

Sridhar Raju said...

ಇವತ್ತು ಡಿಸೆಂಬರ್ 31.ಎಲ್ಲರು ಇವತ್ತು ರಾತ್ರಿ ಹನ್ನೆರಡರ ವರೆಗೂ ಕಣ್ಣಿಗೆ ಎಣ್ಣೆ ( ಕೆಲವರು ಹೊಟ್ಟೆಗೂ ಎಣ್ಣೆ )ಬಿಟ್ಟುಕೊಂಡು, ಹೊಸ ವರ್ಷ ಬಂತೆಂದು ಕಿರುಚಾಡಿ, ಪಟಾಕಿ ಹೊಡೆದು, (ಪ್ರಾಣಿಗಳನ್ನು ದಿಗಿಲುಗೊಳಿಸಿ,ಎಬ್ಬಿಸಿ ) ಸಂತೋಷಪಡುವ ಪ್ರತೀತಿಯಿದೆ...

he he he chennagive ee melina lines -u...hmmm...nimmma prashnegaLu chintanaarha...

santosha paDakke janaru nepa hudukthaare...ellraddu default state santosha iralvalla...adakke ee reethi santosha(!!), sambhrama nadesthaare...relax aagthaare, chill aagthaare..ondu putta gift -u, ondu putta wish -u, relax maadallva?? aadre aacharso reethi bere avrige tondare kodbaardu ashte... hosa varsha aacharaNe na bramnhaandada level nalli nodidre nam(andre maanavara) existence -e crap -u, innu naav maado kelsagaLu, aacharaNegaLu ella crap -u, kelvu sala hard core reality gaLna swalpa mattigaadru mareebeku .. enantheera???

Srikanth - ಶ್ರೀಕಾಂತ said...

ಪ್ರಾಚೀನ ಕಾಲದಿಂದಲೂ ಸೂರ್ಯನನ್ನಾಧಾರಿಸಿಯೇ ದಿನಗಳನ್ನು ಎಣಿಸುತ್ತಾ ಬಂದಿದ್ದಾರೆ. ಈ ಮಧ್ಯರಾತ್ರಿ ಹನ್ನೆರಡು ಘಂಟೆ ದಿನಾರಂಭವಾಗುತ್ತದೆ ಎನ್ನುವುದು ಸೂರ್ಯನನ್ನಾಧಾರಿಸಿಯೋ ಚಂದ್ರನನ್ನಾಧಾರಿಸಿಯೋ ನಕ್ಷತ್ರಗಳನ್ನಾಧಾರಿಸಿಯೋ?

Lakshmi Shashidhar Chaitanya said...

@ಪರಿಸರ ಪೇಮಿ:

ನಿಜ !! ನಾವು ಮುಂದುವರೆಯಲು ಇಚ್ಛಿಸುವುದೇ ಇಲ್ಲ !

@ಶ್ರೀಧರ:

ನಾನು ಹೊಸ ವಷದ ಆಚರಣೆಯ ಸಂಪೂರ್ಣ ವಿರೋಧಿ ಅಲ್ಲ.ಆದರೆ ಆ ಆಚರಣೆಯ ಅನಿವಾರ್ಯತೆಯ ಬಗ್ಗೆ ಜಿಜ್ಞಾಸೆ ಇದೆ ಅಷ್ಟೇ !

Srinivasa Rajan (Aniruddha Bhattaraka) said...

ee hosa varsha (for that matter, any occassion) aacharaNe tappalla.. eega namma praacheena paddhati prakaara ugaadi aacharsalva? adoo namge hosa varshave.. aacharaNe tappalla.. aadre aachariso vidhi--> tumba mukhya... santosha paDbeku nija.. aadre bereyavrnu santosha paDsi taavoo santosha paTre aa aacharaNe ge khaNDita nanna virodhavilla.. (however, ee nishaachara paddhatigaLna naanoo khanDa-tunDavaagi khanDistini..)

btw, ee nimma lekhana nange nannade ondu haLeya lekhanavanna nenpistu.. its abt birthdays (but aacharaNegaLa bagge heLidde) ee link noDi.. enansutte heLi...
http://gandabherunda.blogspot.com/2006/12/blog-post.html