Friday, December 7, 2007

ಏಕೀ ಕ್ರೌರ್ಯ ?

Exam tensionನಿಂದಲೋ,ಅಥವಾ ನನಗೆ ಆಸಕ್ತಿ ಇಲ್ಲವೋ ಎನೋ, ನಾನೆಂದೂ 4th block jayanagar ನ bus stop ಸರಿಯಾಗಿ ನೋಡೇ ಇರ್ಲಿಲ್ಲ. ನೆನ್ನೆ exam ಮುಗಿತಲ್ಲ,ಲೋಕವೆಲ್ಲಾ ಹೊಸದಾಗಿ ಕಾಣಿಸುತ್ತಿತ್ತು. ಚುಮು ಚುಮು ಛಳಿ,ತುಂತುರು ಮಳೆಯಲ್ಲಿ ನಡೆದು ಬರುತ್ತಾ ಅತ್ತಿತ್ತ ಕಣ್ಣಾಡಿಸಿದೆ. ಎಲ್ಲ ಕಡೆ ಹೊಸದಾಗಿ ಬಿಡುಗಡೆಯಾದ ಸಿನೆಮಾಗಳ ಭಿತ್ತಿ ಚಿತ್ರಗಳು ರಾರಾಜಿಸುತ್ತಿದ್ದವು. ಎಲ್ಲಾ ನಾಯಕರ ಕೈಯಲ್ಲೂ ಮಚ್ಚು, ಲಾಂಗುಗಳು. ಒಬ್ಬ ನಾಯಕನ ಕಣ್ಣುಗಳು ಎಷ್ಟು ಭಯಂಕರವಾಗಿತ್ತೆಂದರೆ,ನನಗೆ ಮಹಿಷಾಸುರನ ನೆನಪಾಯಿತು. ಮರುಕ್ಷಣವೇ ನಗೆಯೂ ಬಂತು. ಆ ಚಿತ್ರದ tag line ನಲ್ಲಿ ಇಲ್ಲಿ ಪ್ರೀತಿಯೆ ಎಲ್ಲಾ ಎಂಬ ಅರ್ಥವನ್ನು ಕೊಡುತ್ತಿತ್ತು. ಪ್ರೀತಿಸಲು ಕ್ರೌರ್ಯದ ಅವಶ್ಯಕತೆ ಇದೆಯೆ ?ರೌಡಿಯೊಬ್ಬ ಒಳ್ಳೆಯವನಾಗಿ ಪರಿವರ್ತನೆಗೊಳ್ಳುವ ಕಥೆಯೆಂದು ಈ ಚಿತ್ರದ ನಿರ್ಮಾಪಕರು ಸಾರಿ ಸಾರಿ ಹೇಳಿದರೂ ಈ ಚಿತ್ರದಲ್ಲಿನ ಕ್ರೌರ್ಯ ಮತ್ತು ಹಿಂಸೆಯೇ ಜನರಲ್ಲಿ ಉಳಿಯುತ್ತದೆ. ಇದನ್ನು ಯಾರೂ ಅಲ್ಲಗಳೆಯಲು ಆಗುವುದಿಲ್ಲ.

ಈಗೀಗ ಎಲ್ಲವೂ ಕ್ರೌರ್ಯಮಯವೇ ಆಗಿದೆ. ದೇಶ ದೇಶಗಳ ನಡುವೆ ಕ್ರೌರ್ಯ,ರಾಜ್ಯ ರಾಜ್ಯದ ನಡುವೆ ಕ್ರೌರ್ಯ, ಪೇಟೆಯ ಗಲ್ಲಿ ಗಲ್ಲಿಗಳಲ್ಲೂ ಕ್ರೌರ್ಯ ! ಈ ಕ್ರೌರ್ಯಕ್ಕೆ ಸಿನೆಮಾಗಳಲ್ಲಿ ವೈಭವೀಕರಣ ಬೇರೆ ! ಈಗೀಗ ಮಕ್ಕಳು, g i Jo, batman ಅಂತಹ cartoon ಗಳನ್ನು ನೋಡಿ ತಮ್ಮ ಸ್ನೇಹಿತರನ್ನು ನೋಯಿಸಲು ಪ್ರಯತ್ನಿಸುತ್ತಿದ್ದಾರೆ.video game ಗಳೂ ಸಹ ಇದಕ್ಕೆ ಪೂರಕವಾಗೇ ಇದೆ.ಇದನ್ನು ಮಕ್ಕಳಾಟವೆಂದು ಕಡೆಗಾಣಿಸಿದರೆ ಅದು ಮುಂದೆ ಖಂಡಿತಾ ಮಾರಕವಾಗುತ್ತದೆ.ಒಂದು ಕಾಲದಲ್ಲಿ ಮಕ್ಕಳಿಗೆ ಬಂದೂಕನ್ನು ತೆಗೆಸಿಕೊಟ್ಟು ತಮ್ಮ ಮಗು ದೇಶ ಕಾಯುವ ಸೈನಿಕನಾಗಲಿ ಎಂದು ಆಶಿಸುತ್ತಿದ್ದ ಪೋಷಕರು ಈಗ ತಮ್ಮ ಮಗ ರೌಡಿಯಾಗದೇ ಇರಲಿ ಎಂದು ಭಯಪಡುವ ಹಾಗಾಗಿದೆ. ಔಷಧಿಗಿಂತ ವಿಷವೇ ಮೈಯಲ್ಲಿ ಬೇಗ ಪ್ರವಹಿಸುವ ಹಾಗೆ, ಕ್ರೌರ್ಯ ಮತ್ತು ಹಿಂಸಾತ್ಮಕ ಮನೋಭಾವಗಳು ಮಕ್ಕಳು ಮತ್ತು ಯುವ ಜನರಲ್ಲಿ ಬೇಗ ವ್ಯಾಪಿಸುತ್ತಿದೆ.

ನಾಟಕಗಳಲ್ಲಿ ನವರಸಗಳೂ ಮೇಳೈಸಿ ಅದು ಎಲ್ಲರನ್ನು ರಂಜಿಸಿ, ಒಳ್ಳೆಯ ಸಂದೇಶಗಳನ್ನು ನೀಡಬೇಕೆಂದು ನಾಟ್ಯಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಈಗ ಯಾರಾದರೂ ಪಾಲಿಸಿದ್ದಾರೆಯೇ ? ಹಿಂದೆ ಡಾ|| ರಾಜ್ ಕುಮಾರ್ ಅವರು ಮಾಡುತ್ತಿದ್ದ ಪ್ರತಿಯೊಂದು ಚಿತ್ರದಲ್ಲೂ ಈ ನಿಯಮವನ್ನು ಪಾಲಿಸಲಾಗುತ್ತಿತ್ತು. ಅಂದಿನ ಪೀಳಿಗೆಯವರು ಅವರನ್ನೇ ತಮ್ಮ ಆದರ್ಶವಾಗಿ ನೋಡಿದರು, ಅವರ ಸದ್ಗುಣಗಳನ್ನೇ ಮೈಗೂಡಿಸಿಕೊಂಡು ನಮ್ಮ ಪೀಳಿಗೆಗೆ ಅದನ್ನೇ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ನಾವು ಅವರು ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆಯೇ ? ಉತ್ತರ ಎಲ್ಲರಿಗೂ ಗೊತ್ತೇ ಇದೆ.

ನಿಜವಾಗಲೂ ...ನಾವೇಕೆ ಹೀಗೆ ?

2 comments:

ಅಂತರ್ವಾಣಿ said...

Lakshmi,
thumbaa samayOchitha baraha. ee rowdism aaDharitha cinemaagaLu.. makkaLa mELe pariNama beeruvudu kaNDitha..idarindaaguva dushpariNamavannu pOshakaru makkaLige arivaguvanthe hELabEku.

Srinivasa Rajan (Aniruddha Bhattaraka) said...

ಔಷಧಿಗಿಂತ ವಿಷವೇ ಮೈಯಲ್ಲಿ ಬೇಗ ಪ್ರವಹಿಸುವ ಹಾಗೆ, ಕ್ರೌರ್ಯ ಮತ್ತು ಹಿಂಸಾತ್ಮಕ ಮನೋಭಾವಗಳು ಮಕ್ಕಳು ಮತ್ತು ಯುವ ಜನರಲ್ಲಿ ಬೇಗ ವ್ಯಾಪಿಸುತ್ತಿದೆ.
chinnadanthaa maatu... oppide..

media ge janara mele (especially makkaLa mele) tumba bega influence maaDo antha shakti ide.. adanna ee producers-u yaake ishtu keTTadaagi use maaDkotaaro, devrge gottu..