ನಾನು ಈ ಬಾರಿಯೂ ನಾವೇಕೆ ಹೀಗೆ ಅಂತ ಕೇಳೊಲ್ಲವಾದ್ದರಿಂದ, ನನಗೆ ಗೊತ್ತು ನೀವು ಸಹ " ಲಕ್ಷ್ಮಿ ಏಕೆ ಹೀಗೆ ?" ಅಂತ ಕೇಳೊಲ್ಲ ಅಂತ. :)
ಪ್ರಣತಿ ಸಂಸ್ಥೆ ಮತ್ತೊಂದು ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಈ ಬಾರಿ ಎರಡು ಪುಸ್ತಕಗಳ ಬಿಡುಗಡೆಯಾಗಲಿದೆ. ಸಹಬ್ಲಾಗಿಗರು, ಪ್ರಣತಿಯ ಸದಸ್ಯರೂ ಮತ್ತು ಆತ್ಮೀಯರೂ ಆದ ಸುಶ್ರುತ ಬರೆದ "ಹೊಳೆಬಾಗಿಲು" ಲಲಿತ ಪ್ರಬಂಧಗಳ ಸಂಕಲನ ಮತ್ತು ಶ್ರೀನಿಧಿ ಬರೆದ "ಹೂವು ಹೆಕ್ಕುವ ಸಮಯ" ಕವನಗುಚ್ಛ- ಈ ಎರಡೂ ಪುಸ್ತಕಗಳ ಲೋಕಾರ್ಪಣೆಯ ಖುಷಿ ಪ್ರಣತಿಯದ್ದು. ನೀವು ಬಂದರೆ ನಮ್ಮ ಖುಷಿ ಖಂಡಿತಾ ನೂರ್ಮಡಿಯಾಗಲಿದೆ. ನಾಗತಿಹಳ್ಳಿ ಚಂದ್ರಶೇಖರ್, ಎಚ್. ಎಸ್. ವೆಂಕಟೇಶ ಮೂರ್ತಿ ಮತ್ತು ಜೋಗಿಯವರ ಜೊತೆ ನೀವೆಲ್ಲರೂ ಆಗಸ್ಟ್ ಒಂಭತ್ತನೆಯ ತಾರೀಖು ಬೆಳಿಗ್ಗೆ ಹತ್ತು ಮೂವತ್ತಕ್ಕೆ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಮ್ಮೊಂದಿಗೆ ಇರುತ್ತೀರಿ ಅಂತ ನಂಬಿದ್ದೇವೆ. ಖಂಡಿತಾ ಬನ್ನಿ.
1 comment:
ಸುಶ್ರುತ, ಶ್ರೀನಿಧಿ ಇಬ್ಬರಿಗೂ ಮತ್ತು ಪ್ರಣತಿಗೂ ಶುಭಾಕಾಂಕ್ಷೆಗಳು, ಹಾರೈಕೆಗಳು. ಕಾರ್ಯಕ್ರಮ ಸುಗಮವಾಗಿ ಸುಂದರವಾಗಿ ನೆರವೇರಲಿ.
Post a Comment