Sunday, August 3, 2008

ನೀತಿಕಥೆಗಳು

ಕಥೆ ಹೇಳಮ್ಮ ಅಂತ ಚಿಕ್ಕ ವಯಸ್ಸಿನಲ್ಲಿ ನಾನು ನಮ್ಮಮ್ಮನ ಪೀಡಿಸದ ದಿನವಿಲ್ಲ. ಊಟ ಮಾಡುವಾಗ ಕಥೆ, ಹಾಲು ಕುಡಿಯುವಾಗ ಕಥೆ...ಒಟ್ಟಿನಲ್ಲಿ ಕಾಗಕ್ಕ ಗುಬ್ಬಕ್ಕ ಕಥೆಗಳನ್ನು ಹೊಂದಿಸಿ ಹೇಳುವುದರಲ್ಲಿ ನಮ್ಮಮ್ಮನಿಗೆ ಸಾಕುಬೇಕಾಗಿ ಹೋಗುತ್ತಿತ್ತು. ಅಮರ ಚಿತ್ರಕಥೆ ಪುಸ್ತಕದಿಂದ ಚಿತ್ರ ತೋರಿಸಿ ತೋರಿಸಿ ಕಥೆ ಹೇಳುತ್ತಿದ್ದರು ನಮ್ಮಮ್ಮ. ರಾಮ, ಕೃಷ್ಣರ ಕಥೆ ದಿನಾಗಲೂ ಹೇಳುತ್ತಿದ್ದರು ನಮ್ಮ ಅಜ್ಜಿ ತಾತ.

ಚಂದಿರನಿರದ ರಾತ್ರಿ ನನಗೆ ಊಟ ಮಾಡಿಸಲು ನಮ್ಮಮ್ಮ ಪಾಪ ಹರಸಾಹಸ ಮಾಡುತ್ತಿದ್ದರಂತೆ. ಅವನ ಮುಖ ನೋಡದೇ ತುತ್ತಿಳಿಯುತ್ತಿರಲಿಲ್ಲ ಗಂಟಲಲ್ಲಿ !

ಇದು ಇಪ್ಪತ್ತು ವರ್ಷದ ಹಿಂದಿನ ಮಾತು. ಈಗಿನ ಮನೆಗಳು ಇರುವ ಪರಿಸ್ಥಿತಿಯಲ್ಲಿ ಯಾರೂ ಹೊರಬರಲು ಇಷ್ಟವೇ ಪಡುವುದಿಲ್ಲ. ಧೂಳು, ವಾಹನ, ಶಬ್ದ....ಟೆರೇಸೆಂದು ಹೆಸರಿಗೆ, ಸುತ್ತಲ್ಲಾ ಮನೆಗಳು, ಆಕಾಶ ನೋಡಲೂ ಆಗುವುದಿಲ್ಲ ನೆಟ್ಟಗೆ. ಇನ್ನು ಚಂದ್ರನನ್ನು ನೋಡುವುದೇನು ಬಂತು ? ಪುಟ್ಟ ಮಕ್ಕಳು ತಮ್ಮ ಬಾಲ್ಯದ ಅತಿ ಸವಿಯಾದ ಅನುಭವವೊಂದರಿಂದ ವಂಚಿತರಾಗುತ್ತಿದ್ದಾರೆ. ಸದ್ದಿಲ್ಲದ್ದೇ...

ನಮಗೆ ಕಥೆಗಳ ಅವಶ್ಯಕತೆಯೇನೆಂದು ಕೇಳುತ್ತೀರ ? ನಮ್ಮ ತಂದೆ -ತಾಯಿ, ಅಜ್ಜ- ಅಜ್ಜಿಯರು ಹೇಳುವೆ ಕಥೆಯೆ ನಮ್ಮ ಕ್ರಿಯಾಶೀಲತೆ ಮತ್ತು ಕುತೂಹಲ ಜಾಗೃತವಾಗಲು ಪ್ರಮುಖ ಕಾರಣ. ರಾಜಕುಮಾರನ ಠೀವಿ, ರಾಜಕುಮಾರಿಯ ಗಾಂಭೀರ್ಯ, ಮಂತ್ರಿಯ ಜಾಣ್ಮೆ, ರಾಜನ ದಕ್ಷತೆ ಅವೆಲ್ಲ ತಮ್ಮದೇ ಆದ ಛಾಪೊಂದು ಮೂಡಿಸಿ ಹೋಗಿವೆ ನಮ್ಮ ಮನಃಪಟಲದಲ್ಲಿ. ಕಾಗೆ ಗುಬ್ಬಿಗಳಿಗೆ ಮಾತು ಬರೊಲ್ಲವೆಂಬುದು ನಮಗೆ ನಂತರ ತಿಳಿಯುವ ಸತ್ಯವಷ್ಟೆ. ಆದರೆ ನಾವೆಲ್ಲರೂ ಚಿಕ್ಕವಯಸ್ಸಿನಲ್ಲಿ ಕಾಗೆ ಗುಬ್ಬಿ ನಾಯಿಮರಿಗಳ ಜೊತೆ ಮಾತಾಡಿಯೇ ಇರುತ್ತೇವೆ !

ಇಷ್ಟೆಲ್ಲಾ ಪೀಠಿಕೆ ಕೊಡುವ ಅವಶ್ಯಕತೆ ಏನಪ್ಪಾ ಅಂದರೆ, ಒಂದು ತಿಂಗಳಿನಿಂದ ನಮ್ಮ ಮನೆಯ ಆಸುಪಾಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು. ನಮ್ಮ ತಂದೆಯ ಸ್ನೇಹಿತರ ಮಗಳು ಹೊರದೇಶದಿಂದ ತನ್ನ ಮಗುವೊಂದಿಗೆ ಬಂದಳು. ಮಗು ಮನೆಯವರಿಗೆ ಅಚ್ಚುಮೆಚ್ಚಾಗಿ ಒಮ್ಮೆ ಎತ್ತಿಕೊಳ್ಳಲು ಎಲ್ಲರೂ ಮುಗಿಬೀಳುತ್ತಿದ್ದರು. ನನಗೆ ಕಾಲೇಜಿದ್ದುದರಿಂದ ಸಮಯ ಹೆಚ್ಚು ಸಿಗುತ್ತಿರಲಿಲ್ಲವಾದರೂ ಮಗುವನ್ನು ಮುದ್ದಾಡಿ ಮನಸ್ಸೆಷ್ಟೋ ಉಲ್ಲಸಿತವಾಗುತ್ತಿತ್ತು.ಒಂದು ಮುಖ್ಯವಾದ ಅಂಶವೊಂದನ್ನು ನಾನು ಗಮನಿಸಿದೆ. ಅವಳು ಮಗುವಿಗೆ ಊಟ ಮಾಡಿಸುವಾಗ ಟೀವಿಯನ್ನು ಆನ್ ಮಾಡಲೇಬೇಕಿತ್ತು. ಇಲ್ಲವೆಂದರೆ ಅದು ಊಟವೇ ತಿನ್ನುತ್ತಿರಲಿಲ್ಲ ! ಪೋಗೊ ಅಥವಾ ಕಾರ್ಟೂನ್ ನೆಟ್ವರ್ಕ್ ಚಾನೆಲ್ ಕಣ್ಣಿಗೆ ಬೀಳದೆ ಅದು ತುತ್ತೆತ್ತುತ್ತಿರಲಿಲ್ಲ. ಇಷ್ಟು ಚಿಕ್ಕವಯಸ್ಸಿನಿಂದಲೇ ಮೂರ್ಖರ ಪೆಟ್ಟಿಗೆಯ ಅಭ್ಯಾಸ ಮಾಡಿಸುವುದು ಒಳಿತೇ ? ಅದರ ಬದಲು ನಮ್ಮ ಚಂದ್ರ, ಕಾಗಕ್ಕ ಗುಬ್ಬಕ್ಕಗಳು ಸಾವಿರಪಾಲು ಒಳಿತಲ್ಲವೇ ?

ಇರಲಿ, ಮನೆಯಲ್ಲಿ ಈಗ ತಂದೆ ತಾಯಂದಿರು ಇಬ್ಬರೂ ದುಡಿಯುವವರೇ...ಮಕ್ಕಳು ಮನೆಯಲ್ಲಿ ಗಲಾಟೆ ಮಾಡಿದರೆ ಅವರಿಗೆ ರಮಿಸಲು ಖಂಡಿತಾ ಶಕ್ಯವಲ್ಲ, ಯಾಕಂದರೆ ಕೆಲಸದಲ್ಲಿ ಅವರು ಸಾಕಷ್ಟು ಸುಸ್ತಾಗಿರುತ್ತಾರೆ. ಈಗ ಮನೆಯಲ್ಲಿ ಅಜ್ಜಿ ತಾತಂದಿರು ಇರುವ ಸಂದರ್ಭಗಳು ಕಡಿಮೆ, ಯಾಕಂದರೆ ನಮ್ಮಲ್ಲಿ ಈಗ ವಿಭಕ್ತ ಕುಟುಂಬಗಳು ಹೆಚ್ಚುತ್ತಿದೆ. ಮಕ್ಕಳಿಗೆ ಕಥೆ ಹೇಳಿ, ರಮಿಸಿ, ಅವುಗಳ ಕ್ರಿಯಾಶೀಲತೆಯನ್ನು, ಅವರಿಗೆ ನೀತಿಬೋಧನೆ ಮಾಡುವ ಕೆಲಸವನ್ನು ಹಿಂದಿನ ಕಾಲದಲ್ಲಿ ಮಾಡುತ್ತಿದ್ದವರು ಅಮ್ಮ, ಅಪ್ಪ, ತಾತ ಮತ್ತು ಅಜ್ಜಿ. ವಿಭಕ್ತ ಕುಟುಂಬದಿಂದ ಮತ್ತು ಕೆಲಸದ ಒತ್ತಡದಿಂದ ಮಕ್ಕಳ ಬೆಳವಣಿಗೆಯ ಬಹು ಮುಖ್ಯ ಕೊಂಡಿಯೊಂದನ್ನು ಸಡಿಲಗೊಳಿಸಿದ್ದೇವೆ.

ರಾತ್ರಿಗಟ್ಟಲೆ ಕ್ಯೂ ನಲ್ಲಿ ನಿಂತು, ಮಕ್ಕಳ ಶಾಲೆಯ ದಾಖಲಾತಿಗೆ ತಾಯಿ ತಂದೆಯರು ಕಷ್ಟಪಟ್ಟು ಇಂಟೆರ್ವ್ಯೂ ಪಾಸ್ ಮಾಡಿ ಮಕ್ಕಳನ್ನು ಒಳ್ಳೆ ಶಾಲೆಗೆ ಸೇರಿಸುತ್ತಾರೆ. ಶಾಲೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ. ಆದರೆ ಇತ್ತೀಚಿಗೆ ನಾನು ಬಹಳಷ್ಟು ಶಾಲೆಗಳಲ್ಲಿ ನೀತಿ ಪಾಠ (ಮಾರಲ್ ಎಡುಕೇಷನ್/ಮಾರಲ್ ಸೈನ್ಸ್) ಮಾಡುವುದನ್ನು ನೋಡೇ ಇಲ್ಲ.

ನಾನು ಶಾಲೆಯಲ್ಲಿದ್ದಾಗ ನಮಗೆ ನೀತಿ ಪಾಠಕ್ಕೊಂದು ಪಠ್ಯಪುಸ್ತಕವೂ ಇರುತ್ತಿತ್ತು. ಪ್ರಾಜೆಕ್ಟ್ ಗಳೂ ಇರುತ್ತಿದ್ದವು. ಅದನ್ನು ಮಾಡಿದರೆ ನಮಗೆ ಬಹುಮಾನಗಳು ಇರುತ್ತಿದ್ದವು. ನಾವೆಲ್ಲರೂ ಮುಗಿಬಿದ್ದು ಮಾಡುತ್ತಿದ್ದೆವು. ಅದಕ್ಕಾಗಿ ನಮಗೆ ಮಾರಲ್ ಸೈನ್ಸ್ ನಲ್ಲಿ ಆಸಕ್ತಿಯೋ ಆಸಕ್ತಿ. ನಮ್ಮ ನೀತಿಪಾಠದ ಮೇಡಮ್ ಎಷ್ಟು ಚೆನ್ನಾಗಿ ಕಥೆ ಹೇಳುತ್ತಿದ್ದರೆಂದರೆ, ಪಾತ್ರಗಳೆಲ್ಲ ನಮ್ಮ ಕಣ್ಣೆದುರು ನಿಲ್ಲುತ್ತಿದ್ದವು. ಮೊಲದ ಜಾಣ್ಮೆ, ಆಮೆಯ ಸ್ಥೈರ್ಯ..ಇವೆಲ್ಲ ಹಾಗೆ ನಮ್ಮಲ್ಲಿ ಗುಣಗಳಾಗಿ, ನೀತಿಗಳಾಗಿ ಮಿಳಿತಗೊಂಡುಬಿಡುತ್ತಿದ್ದವು !

ಈಗಿನ ಶಾಲೆಯ ಮಕ್ಕಳಿಗೆ ನೀತಿಪಾಠ ಕೂತು ಕೇಳುವುದಕ್ಕಿಂತ ಚಿತ್ರಗೀತೆಯೊಂದರ ಅರ್ಥವಿಲ್ಲದ ಹಾಡಿಗೆ ಮೈಯನ್ನು ರಬ್ಬರಂತೆ ಬಗ್ಗಿಸಿ ಕುಣಿಯುವುದಿಷ್ಟ. ಇದು ತಪ್ಪೆಂದು ಹೇಳುತ್ತಿಲ್ಲ, ಅದರೊಂದಿಗೆ ಇದೂ ಇದ್ದಿದ್ದರೆ ಚೆನ್ನ ಎಂದೆ ಅಷ್ಟೆ. ಮಾರಲ್ ಸೈನ್ಸ್ ಅಂದರೆ ಮುಖ ತಿರುಗಿಸಿ, ಗ್ರೇಡ್ ಗಾಗಿ ಹೇಗೋ ಓದಿ ಪಾಸ್ ಮಾಡುವಂಥಾ ಸ್ಥಿತಿಬಂದಿದೆ ನೀತಿಪಾಠಕ್ಕೆ ! ಕರಕುಶಲ ಕಲೆಗಳಿಗೂ ತಕ್ಕ ಪ್ರೋತ್ಸಾಹ, ಮಾನ್ಯತೆ ಸಿಗುತ್ತಿಲ್ಲವಾದ್ದರಿಂದ ಅದೂ ಕೂಡಾ ದಿನೇ ದಿನೇ ಕಡಿಮೆಯಾಗುತ್ತಿದೆ. ಶಿಕ್ಷಕರ ಕೊರತೆಯಿಂದಲೋ, ಅಥವಾ ಅವರು ಮಕ್ಕಳಲ್ಲಿ ಆಸಕ್ತಿ, ಕುತೂಹಲ ಹುಟ್ಟಿಸಲು ದುರದೃಷ್ಟವಶಾತ್ ವಿಫಲವಾದುದರಿಂದ, ಶಾಲೆಯಲ್ಲೂ ಸಹ ಮಕ್ಕಳು ನೀತಿಪಾಠದಿಂದ ವಂಚಿತರಾಗಿದ್ದಾರೆ.

ಮೂರ್ಖರ ಪೆಟ್ಟಿಗೆ ನೀತಿಪಾಠ ಬೋಧಿಸಲಲು ಪ್ರಯತ್ನಿಸುತ್ತಿದೆಯಾದರೂ ಚಾನೆಲ್ ಚೇಂಜ್ ಮಾಡುವ ದಿವ್ಯ ಸೌಲಭ್ಯವೊಂದನ್ನು ಈ ಪೆಟ್ಟಿಗೆ ಹೊಂದಿದೆಯಾದ್ದರಿಂದ ಅವೆಲ್ಲ ಕಂಡೂ ಕಾಣದಂತಿವೆ. ಕಾರ್ಟೂನ್ ನೆಟ್ವರ್ಕಿನವರು ಮಹಾಭಾರತ ರಾಮಾಯಣಗಳನ್ನು ಮಾಡಿ ಪ್ರಸಾರ ಮಾಡುತ್ತಿವೆಯಾದರೂ ಅವು ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್ ಅಷ್ಟು ಮಕ್ಕಳ ಮೇಲೆ ಪ್ರಭಾವ ಬೀರುತ್ತಿಲ್ಲದಿರುವುದು ದುರಂತ.

ಹೀಗೆ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ, ಅವರ ಬೆಳವಣಿಗೆಯ ಇಟ್ಟಿಗೆಗಳಲ್ಲಿ ಒಂದು ಇಟ್ಟಿಗೆ ಇಲ್ಲದಾಗಿದೆ ಅನ್ನುವ ಅರಿವಿಲ್ಲದೇ..

ಆದರೆ ಇತ್ತೀಚೆಗೆ ಹೊಸದೊಂದು ವಿಷಯವನ್ನು ನನ್ನ ಸಾಫ್ಟ್ ವೇರ್ ಎಂಜಿನೀರ್ ಗೆಳತಿಯರು ನನಗೆ ಹೇಳುತ್ತಿದ್ದರೆ. ಎಂಥದ್ದೋ ಪರ್ಸನಾಲಿಟಿ ಡೆವೆಲಪ್ಮೆಂಟ್ ಪ್ರೋಗ್ರಾಮಂತೆ, ಒಂದರಿಂದ ಮೂರು ದಿನದ ಪ್ರೋಗ್ರಾಮಂತೆ, ಅಲ್ಲಿ ಪ್ರಪಂಚದ ಎಲ್ಲ ತತ್ವಜ್ಞಾನಿಗಳ ವಿಚಾರಧಾರೆಯನ್ನೂ ಅರುಹಿ, "ಮ್ಯಾನೇಜ್ಮೆಂಟ್ ಸ್ಕಿಲ್" ಗಳನ್ನು ಯೂರೋಪು, ಚೀನಿ, ಗ್ರೀಕಿನ ಕಥೆಗೆಅಳ ಮೂಲಕ ತಿಳಿಸುತ್ತಾರಂತೆ. ಆಗಾಗ ನಮ್ಮ ದೇಶದ್ದೂ ಕೆಲ ಕಥೆಗಳೂ ಅಲ್ಲಿ ಬರುತ್ತವಂತೆ. ಕೊಕ್ಕರೆ ಮತ್ತು ನರಿಯ ಪಾಯಸ ಕುಡಿಯುವ ಕಥೆಯನ್ನು ಚಿಕ್ಕಂದಿನಲ್ಲಿ ಕೇಳಿರದ ನನ್ನ ಸ್ನೇಹಿತೆ ಪಾಪ ಆ ಕಥೆಯನ್ನು ನಾನೂ ಕೇಳಿಲ್ಲವೆಂದುಕೊಂಡು ಬಹಳ ಆಸಕ್ತಿಯಿಂದ ಹೇಳಿದಳು. ಜೊತೆಗೆ ಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದನಂತೆ, ಮಹಾಭಾರತದಲ್ಲಂತೆ ಗೀತೋಪದೇಶ ಇರುವುದು, ಇಷ್ಟುದಿನ ಅದು ಬೇರೆ ಪುರಾಣ ಎಂದುಕೊಂಡಿದ್ದಳಂತೆ ಅವಳು..ಇವೇ ಮುಂತಾದ ಅವಳಿಗೆ ರೋಚಕವೆನಿಸುವ, ನನಗೆ ಅವಳ ಸ್ಥಿತಿ ಕಂಡು ಮರುಗುವ ವಿಷಯಗಳನ್ನು ತೀರಾ ಇತ್ತೀಚೆಗೆ ತಿಳಿಸಿದಳು. ಐದಾರು ಸಾವಿರ ರುಪಾಯಿ ಕೊಟ್ಟು personality development workshop ಸೇರಿಕೊಂಡು ಎಲ್ಲಾ ಸ್ಕಿಲ್ಲುಗಳನ್ನು ಕಲಿತು ಉದ್ಧಾರವಾಗುತ್ತೇನೆಂದು ಹೇಳಿದಳು. ಅವಳ ಮಾತೆಲ್ಲ ಕೇಳಿದ ಮೇಲೆ ನಾನು ಕೇಳಿದೆ- " ನಿನಗೆ ಅಜ್ಜಿ ತಾತ ಇದ್ದಾರ ?

ಅವಳು : ಹೂ...ಅಜ್ಜಿ ಇದ್ದಾರೆ..ಮನೆಯಲ್ಲಲ್ಲ, ವೃದ್ಧಾಶ್ರಮದಲ್ಲಿ. ವೀಕೆಂಡ್ ನಲ್ಲಿ ಯಾವಾಗ್ಲಾದ್ರೂ ಒಂದು ಸಲ ಅಪ್ಪ ಅಮ್ಮನ ಜೊತೆ ಹೋಗಿ ನೋಡಿ ಬರುತ್ತೇನೆ ಅಷ್ಟೆ. No intimacy with her.

ನಾನಂದೆ- "Why ? she is your grandmother after all...why dont you spend sometime with her ?"

ಅವಳು: "Oh dont tell me. grandparents are such a bore I tell you ! They bug me with so many things ! My granny used to attend pravachanas ...is that how you spell ? pra va cha naas ? ...yep...she used to attend them and used to tell me some cock and bull stories of some bhaagavatha.I thought that was a person's name...but soon realised it was a book ! who else other than oldie gang will listen to it you tell me lakshmi ? She wants me to listen to her. I wont ! I am not old ! Not at all ! And she compares our glorious Harry Potter to some old and unheard book called hitopadesha. where is our glorious hero animagus Sirius Black ? And where is some silly fox called by some weird name ? I dont even know how to spell it. Do you know it ?

ನಾನಂದೆ-"yeah...its called madanaka."

ಅವಳು: "Whatever ! how do you expect me to live with her ? man...unbearable ! and after some time, things never worked out between us, so she left home to join an old age home.

ಅದೇನೋ ಕೆಲವೊಮ್ಮೆ ನನಗೆ ಮಾತಾಡಬೇಕೆನಿಸಿದರೂ ಮಾತೇ ಹೊರಬರುವುದಿಲ್ಲ.ನಿಜ ಹೇಳುತ್ತಿದ್ದೇನೆ ನನಗೆ ಅವಳಿಗೆ ಹೀಗೆ ಪ್ರತ್ಯುತ್ತರ ನೀಡುವ ಮಹದಾಶೆ ಇತ್ತು :
"you were telling me the about personality development workshop that you want to attend. No offence meant, do you have any idea what kind of stories do they tell you there ? Modified versions and simalr to those stories of hitopadesha, panchatantra, ramayana and mahabharatha.what did you call them then ? " cock and bull isn't it ? Tell me one thing,you believe that a scorpion stung Orion and they two appear as constellations in the sky,but you don't believe a little boy dhruva doing penance and becoming a star called the pole star ? Well, it is left to your belief. but you must remember one thing, Chinese philosphy, Taoism, Confucianism, Buddhism all these different schools of thought have risen thousands of years after Lord Krishna preached the gita and vyasa wrote mahabharatha. And take my word, there can be no better book on management of your inner and the outer self and to be an all round winner other than The Gita.There is no problem which has not addressed in our religious texts and they give a better, long lasting and easily feasible solutions, I vouch for it.

You were talking about Harry Potter and Hitopadesha : Do you know what hitopadesha deals with ? These are stories which deal with different aspects of friendship and how to deal with friends. What does harry potter tell you other than potions and broths, jinxes and curses, hatred, jealousy, grudge, fear and fight ? Point me one good thing and I surrender. Our vikram- betal stories are much more interesting and thrilling. Don't you dare talk about Harry and Ron's friendship, it is definitely not at par with the relationship of karna and duryodhana. They belong to the mahabharatha story, if you didn't know. You talked about animagi- people turning into animals by a spell..didn't you ? You must know one thing,Indra was the first animagus among the angels and mahishasura was the first animagus among the demons. You found Hagrid great, but not our hero Ghatotkacha. Write this name down and google for it. You will get to know what all he did. Hagrid is just nothing in comparision.

You will be very surprised if I tell you one thing, the word that you took time to spell - pravachana, that does not always talk about attaining enlightenement, sanyasa and leading life of an hermit which you think is fit for oldies. It talk about problems and gives the intelligence and tact to get over with it and courage to get along with it. And, they are not charged but done for free, and you listen to the same pravachanas over a powerpoint presentation paying thousands of rupees ! I really pity you. I am nobody to talk or comment your family matters, but in my opinion, your grandmother would have given you much better knowledge and a fantastic personality, had you been intimate with her. And you could have saved the money and earned something priceless in turn...love and affection of your grandparent !

ಇದೆಲ್ಲಾ ನನ್ನ ಬಾಯಿಂದ ಹೊರಡಲೇ ಇಲ್ಲ. ಪ್ರಾಯಶಃ ನಾನಿದನ್ನು ಹೇಳಿದ್ದಿದ್ದರೂ, ನನಗೆ ಹೀಗೆ ಪ್ರತಿಕ್ರಿಯೆ ಸಿಗುತ್ತಿತ್ತು -
" what a boring lecture ! "

ಅಥವಾ

" thanks for all the gyan..but I am not interested."

ನನಗೆ ಸರ್ವಜ್ಞನ ವಚನವೊಂದು ನೆನಪಾಯ್ತು.

ಮೂರ್ಖರಿಗೆ ಬುದ್ಧಿಯನು ನೂರ್ಕಾಲ ಹೇಳಿದರೆ
ಗೋರ್ಕಲ್ಲ ಮೇಲೆ ಮಳೆಸುರಿದಂತೆ - ಸರ್ವಜ್ಞ

ಇಂಥವರಿಗೆಲ್ಲಾ ಅದೇ ಪವರ್ ಪಾಯಿಂಟ್ ಪ್ರವಚನಗಳಲ್ಲಿ,
  • Respect and love your parents and grandparents .
  • Read a verse of The Gita everyday.
  • Read Bhaagavatha once a week.
  • Pray to God once a day without fail.
ಅಂತ ಬುಲ್ಲೆಟೆಡ್ ಪಾಯಿಂಟುಗಳನ್ನು highlight ಮಾಡಿ ತೋರಿಸಿದರೇನೆ ಬುದ್ಧಿ ಬರುವುದು ಅಂದುಕೊಂಡು ಸುಮ್ಮನಾದೆ. ನೀತಿಪಾಠ ಶಾಲೆಯಲ್ಲಿ ಕಲಿಯದಿದ್ದುದಕ್ಕೆ ಇಷ್ಟು ದೊಡ್ಡ ಮೊತ್ತ ತೆರಬೇಕೆ ? ನಾವೇಕೆ ಹೀಗೆ ?

13 comments:

ಶ್ರೀನಿಧಿ.ಡಿ.ಎಸ್ said...

nice one, liked it.

Harisha - ಹರೀಶ said...

I concur... totally..

ನಾನೂ ಹ್ಯಾರಿ ಪಾಟರ್ ಅಭಿಮಾನಿ. ಹಾಗಂತ ನನಗೆ ಕೇಳಲು ಇಷ್ಟವಾಗುವುದು, ನೀತಿ ಇದೆ ಎನಿಸುವುದು ರಾಮಾಯಣ ಮಹಾಭಾರತಗಳಲ್ಲಿಯೇ.

ಮಹಾಭಾರತದ ಬಗ್ಗೆ ಹೇಳುವ यदिहास्ति तदन्यत्र यन्नेहास्ति न तत् क्वचित् ಎಂಬ ಮಾತು ಬಹಳಷ್ಟು ಜನರಿಗೆ ತಿಳಿದೇ ಇಲ್ಲದಿರುವುದೇ ಪ್ರಾಬ್ಲಂ :-)

ವಿ.ರಾ.ಹೆ. said...

ಹ್ಮ್.. ನಾವೇಕೆ ಹೀಗೆ?!
ಓದುತ್ತಾ ಹೋದಂತೆ ವಿಷಾದ ವಿಷಾದ :(

ನಮಗೂ ಶಾಲೆಯಲ್ಲಿ ನೀತಿಪಾಠವೆಂಬ ವಿಷಯವೊಂದಿತ್ತು. ಆವಾಗ ಅದನ್ನು ಬೈಯುತ್ತಾ ಇದ್ವಿ. ಆದರೆ ಅದರಿಂದ ಎಷ್ಟೆಲ್ಲಾ ಕಲಿತೆವು ಎಂಬುದು ಈಗ ಯೋಚಿಸಿದರೆ ತಿಳಿಯುತ್ತದೆ. ನಮ್ಮವೇ ಆದ ಪಂಚತಂತ್ರದ ಕಥೆ ಇತ್ಯಾದಿಗಳಲ್ಲಿ ಇರುವಷ್ಟ ಸತ್ವ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎಂಬುದು ನಿಜ.
ಆದರೇನು ಮಾಡುವುದು ನಮ್ಮ ದೇಶದ ಜನರಿಗೆ... ಹಿತ್ತಲ ಗಿಡ ಮದ್ದಲ್ಲ, ದೂರದ ಬೆಟ್ಟ ನುಣ್ಣಗೆ. Panchatantra stories , so boring....they even dont know how to spell it, but harry potter is fantastic. ! ಇದರಲ್ಲಿ ತಂದೆತಾಯಿಗಳ, ಸಮಾಜದ, ಮಾಧ್ಯಮಗಳ ಪಾತ್ರವೂ ಬಹಳವಿದೆ ಅನ್ನಿಸುತ್ತದೆ.

Unknown said...

Just i can tell these people are "ಆಧುನಿಕ ಮೂರ್ಖರು"!!!!!!

Anonymous said...

aa power point presetations kodavru heLthare horathu aathara ondu salanu nadkoLalla.. Morality begins at home.. Well put Luck.. :-)

Lakshmi Shashidhar Chaitanya said...

@shreenidhi :

Thanks !

@ Harish:

nija ri..."mahaabhaarathadalli iruvudu ella kaDeyU ide, adarallilladiruvudu ninnelloo illa" annodu janakke gottilladirode problem-u nijvaaglu !

@vikas hegde:

houdu, nimma maatugaLu khanDitaa nija.

@padma:

aunty..whatte title ! :-)

@radha:

Thanks kane radhe... BY the way, I agree with yoor statement- morality begins at home!

Lakshmi Shashidhar Chaitanya said...

errata:

harisha avarannu uddEshisida recomment nalli adu ninnellU illa alla "innelloo" illa

Jagali bhaagavata said...

"Read Bhaagavatha once a week..."

Thanks. I shall update my blog atleast once a week from now on.

Unknown said...

I can only say such people are unfortunate & shows their up bringing....In a way I am also unfortunate as I could not do direct my Daughter in that path due to several -ve Family Dynamics...But I am lucky to have Friend like SHASHI from whom I get to know Gist of Bhagavatha, Gita & other MAHA GRANTHAs when ever we meet and travel together to Sringeri.... Great Lakshm! I have always consider you as my other intelectual daughter.

Lakshmi Shashidhar Chaitanya said...

@jagali bhagavatha:

maaDI maaDi...;-) update maaDI ;-)

@kiran prasad :

Uncle, don't feel so sorry for not having done anything. Its never too late to make a beginning :-) yeah...you are indeed lucky to have anna as your friend ! And I am also lucky to have him as my father !

I am extremely thankful for considering me as your daughter ! :-) :-)

ಅಂತರ್ವಾಣಿ said...

ಇರುವ ಲೇಖನಗಳಿಗಿಂತ ಇದು ತುಂಬಾ ಚೆನ್ನಾಗಿದೆ.
ನಾವು ಅಜ್ಜಿ, ಅಜ್ಜರಿಂದಲೇ ಹೆಚ್ಚು ನೀತಿ ತಿಳಿಯಬಹುದು..

Srikanth - ಶ್ರೀಕಾಂತ said...

ಕಾಲಾಯ ತಸ್ಮೈ ನಮಃ

ತಥಾ

ಜಯತಿ ಪರಾಶರಸೂನುಃ ಸತ್ಯವತೀಹೃದಯನನ್ದನೋ ವ್ಯಾಸಃ
ಯಸ್ಯಾಸ್ಯಕಮಲಗಲಿತಂ ವಾಙ್ಮಯಮಮೃತಂ ಜಗತ್ಪಿಬತಿ

Prathima said...

I have grown up on a regular dose of stories from panchatantra, mahabharatha, ramayana,
Buddha's stories etc. and I think they are brilliant. But I also appreciate Harry Potter and had you read it carefully enough, you would find a lot of morality in it.
Yes, it has things like magic, spells as its theme, but so does our ancient books. Why not
take the best of both and enjoy?
Your friend is just not exposed to Indian stories and is not broad-minded enough to accept the good things that could possibly be in it. You seem to have the same attitude towards books like Harry Potter. So what's the difference between you and her.
Here, the actual problem that should have been highlighted was her intolerance to her grandmother to whom she should be kind and attentive.
Difference of taste in stories hardly matters.