Saturday, December 15, 2007

ನಾದಮಯ

ನಾದಮಯ...........
ನಾದಮಯ ಈ ಲೋಕವೆಲ್ಲಾ

ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ.......
ನಾದಮಯ ಈ ಲೋಕವೆಲ್ಲಾ

ನಾದಮಯ.......

ಡಾ||ರಾಜ್ ಕುಮಾರ್ ಅವರು ಅದ್ಭುತವಾಗಿ ಹಾಡಿರುವ ಈ ಹಾಡಿನ ಹೊಸ ರೂಪ :(ಗಾಯಕರ ಮತ್ತು ರಚನೆಕಾರರ ಕ್ಷಮೆ ಕೋರಿ )
ನಾದಮಯ...ಈ ಲೋಕವೆಲ್ಲಾ...
mobile ಇಂದ car ಇಂದ ಎಲ್ಲೆಲ್ಲು ಬರುತಿರಲು
ತನುವ ಕುಣಿಸಿ ದಿಗಿಲು ತರಿಸಿ ಎಲ್ಲರ
ನಿದಿರೆ ಕೆಡಿಪ ಮನದ ಹಾಳು ಶೋಕಿಯಿದು
ನಾದಮಯಾ....

ಪ್ರಪಂಚವೇ ನಾದಮಯ ಎಂದು ಆಧ್ಯಾತ್ಮದಲ್ಲಿ ಹೇಳಲಾಗಿದೆ.ಆದರೆ ಮೊಬೈಲ್ ರಿಂಗ್ ಟೋನ್, ಮತ್ತು ಕಾರ್ ನ reverse horn ಶಬ್ದಗಳಂತಹ ಆನಂದ ತರದ ನಾದವು ಅತಿಯಾಗಿ ನಮ್ಮ ಮೆದುಳನ್ನೇ ಗೋಧಿ ಹಿಟ್ಟಿನ ತರಹ ನಾದುತ್ತಿರುವ ಹಾಗೆ ಭಾಸವಾಗುತ್ತದೆ. ಈಗಂತೂ ಎಲ್ಲರ ಬಳಿಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಎಲ್ಲ ಚಲನಚಿತ್ರ ನಿರ್ಮಾಪಕರೂ ತಮ್ಮ ಚಿತ್ರಕ್ಕೆ ಪ್ರಚಾರ ಕೊಡುವುದಕ್ಕೋಸ್ಕರ ತಮ್ಮ ಎಲ್ಲ ಚಿತ್ರದ ಹಾಡುಗಳನ್ನು ರಿಂಗ್ ಟೋನ್ ಮತ್ತು ಸಿಂಗ್ ಟೋನ್ ಗಳಾಗಿ ಮಾಡಿ ಎಲ್ಲರ ತಲೆ ಕೆಡಿಸಿದ್ದಾರೆ. ಏನೋ ಮುಖ್ಯವಾದ ವಿಷಯ ಮಾತಾಡಲು ಕರೆ ಮಾಡಿದರೆ..."ಮಾರ್ ಡಾಲ" ಎಂದು ಕೇಳಿಸುತ್ತದೆ. ದೇವಸ್ಥಾನದ ಪೂಜಾ ಸಮಯದಲ್ಲೂ ಮೊಬೈಲ್ !!! Vibrator mode ನಲ್ಲಿ ಮೊಬೈಲ್ ಶಬ್ದ ಮಾಡಿದಾಗ, ಮೈಯೇ ಅದರುತ್ತದೆ ! ಎಲ್ಲರ ಮುಂದೆ ಎದ್ದು ಹೋಗುವುದೇ ದೊಡ್ಡ fashion ಆಗಿ ಹೋಗಿದೆ ! ನಾವು ಕಂಡು ಹಿಡಿದ ವಸ್ತುಗಳಿಗೆ ನಾವೇ ಹೀಗೆ ದಾಸರಾಗುವುದು ಸರಿಯೇ ?ಮೊಬೈಲ್ ಅವಶ್ಯಕ ಹೌದು...ಆದರೆ ಅನಿವಾರ್ಯ ಅಲ್ಲ.

ಇನ್ನು ಕಾರ್ ನ ರಿವರ್ಸ್ ಶಬ್ದ.ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿಗಳಾನ್ನು ಎಚ್ಚರಿಸಲು ಇದನ್ನು ಉಪಯೋಗಿಸುವುದು ಸರಿ. ಆದರೆ,ಮನೆಯಲ್ಲಿ ಕಾರ್ ಪಾರ್ಕ್ ಮಾಡುವಾಗ ಮತ್ತು ಕಾರ್ ಹೊರತೆಗೆಯುವಾಗ ಇದನ್ನು ಹಾಕುವ ಅವಶ್ಯಕತೆಯಾದರೂ ಏನು ? ನಮ್ಮ ಮನೆಯಲ್ಲಿ ಕಾರ್ ಇದೆ ಎಂದು ತೋರಿಸಿಕೊಳ್ಳುವುದಕ್ಕೇ ? ಅರ್ಧರಾತ್ರಿಯಲ್ಲಿ ಜನರೆಲ್ಲರೂ ನಿದ್ರಿಸುವಾಗ "ವಂದೇ ಮಾತರಮ್" ಎಂದು ರಾಷ್ಟ್ರದ ಗೀತೆಯನ್ನು ಕೇಳಿಸುವುದು ಎಷ್ಟರ ಮಟ್ಟಿಗೆ ಸರಿ ?ರಾಷ್ಟ್ರಗೀತೆಗೆ ಗೌರವವೇ ಇಲ್ಲದಿರುವುದು ಈ ದೇಶದ ದೊಡ್ಡ ದುರಂತ. S.P.Balasubramaniam , Cyrus broacha (MTV VJ)..ಇವರೆಲ್ಲರೂ ಇದರ ಬಗ್ಗೆ ಮಾತಾಡಿ ಇದನ್ನು ಖಂಡಿಸಿದ್ದಾರೆ. ಆದರೂ ಜನರಲ್ಲಿ ಇನ್ನೂ ವಿವೇಕದ ರಿಂಗ್ ಟೋನ್ ಜಾಗೃತವಾಗಿ ರಿಂಗಣಿಸದಿರುವುದು ತೀರಾ ವಿಪರ್ಯಾಸ.

6 comments:

ಅಂತರ್ವಾಣಿ said...

ತುಂಬಾ ಒಳ್ಳೆಯ ಸಂದೇಶ ಹೇಳಿದ್ದೀರಿ. ಇದನ್ನು ಎಲ್ಲಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

Parisarapremi said...

ಹ ಹ್ಹ ಹ್ಹಾ.. ಸಾವಿನ ಸುದ್ದಿ ಹೇಳೋಕೆ ಅಂತ ಮೊನ್ನೆ ಒಬ್ಬರಿಗೆ ಕರೆ ಮಾಡಿದರೆ ಅವರ ಫೋನಿನ ಕಾಲರ್ ಟ್ಯೂನು " ನಿನ್ನಿಂದಲೇ ನಿನ್ನಿಂದಲೇ..." ಅಂತಿತ್ತು!!

Sridhar Raju said...

ನಾವು ಕಂಡು ಹಿಡಿದ ವಸ್ತುಗಳಿಗೆ ನಾವೇ ಹೀಗೆ ದಾಸರಾಗುವುದು ಸರಿಯೇ ?ಮೊಬೈಲ್ ಅವಶ್ಯಕ ಹೌದು...ಆದರೆ ಅನಿವಾರ್ಯ ಅಲ್ಲ.
..
super line -u...noorakke innooraraShTu diTa nim vaayka... :-)

Srinivasa Rajan (Aniruddha Bhattaraka) said...

car alli reverse gear alert irbeku.. adanna switch-on/off maaDo vyavasthe idrantu adbhutavaagirutte (adu introduce aagli bega).. aadre neevu heLdhaage vande maataram/film tunes/etc haaDugaLella nuisance-u.. innu decent aagi, light aagi, jagattigella prachaara maaDde, car hinde irorgashte keLso thara "kik kik kik kik.... kik kik kik kik...." sound-u chennagide.. (kelavu car-gaLalli noDiddini) adanna janaru use maaDkondre oLitu anta nanna abhipraaya...

innu mobile-ge :) no comments-u...

ಪೂರ್ಣ ವಿ-ರಾಮ said...

ನಾದ ಭ್ರಹ್ಮಿಣಿಗೆ ನೂರು ನಮಸ್ಕಾರ.


ತುಂ...........ಬಾ ಚೆನ್ನಾಗಿದೆ.

ಕೊನೆಗೊಮ್ಮೆ
ನಾದಮಯಾ ಈ....


ಥ್ಯಾಂಕ್ಯೂ ಮೇಮ್

ಸುಧೇಶ್ ಶೆಟ್ಟಿ said...

ಮೊಬೈಲ್ ನಮ್ಮ ಏಕಾ೦ತವನ್ನು ಕೊಲ್ಲುತ್ತದೆ. ಹೋದ ತಿ೦ಗಳು ಬಸ್ಸಿನಲ್ಲಿ ನನ್ನ ಮೊಬೈಲ್ ಕಳುವಾಗಿತ್ತು. ಹೇಗೂ ಹೋಯಿತಲ್ಲ. ಇನ್ನು ಒ೦ದು ವಾರದ ತನಕ ಹೊಸ ಮೊಬೈಲ್ ತೆಗೆದು ಕೊಳ್ಳುವುದೇ ಇಲ್ಲ ಎ೦ದು ನಿರ್ಧರಿಸಿದೆ. ಅಬ್ಬಾ… ಆ ಒ೦ದು ವಾರ ಎಷ್ಟು ನೆಮ್ಮದಿಯಿತ್ತು. ಯಾರ ಮಿಸ್ಡ್ ಕಾಲ್ ಕಾಟವೂ ಇಲ್ಲ. ಯಾವ ಅನಗತ್ಯ ಮೆಸೇಜ್ ಇಲ್ಲ. ನನಗೆ ಮೊಬೈಲ್ ತೆಗೆದುಕೊಳ್ಳುವ ಮೊದಲು ಇದ್ದ ಏಕಾ೦ತ ಮರುಕಳಿಸಿತ್ತು. ನನ್ನ ಬಳಿ ಮೊಬೈಲ್ ಇಲ್ಲದೆ ಯಾವ ಪ್ರಪ೦ಚವೂ ಮುಳುಗಲಿಲ್ಲ.
ಮೊನ್ನೆ ಬೆಳ್ಳ೦ಬೆಳಗೆ ೫.೩೦ ರ ಹೊತ್ತಿಗೆ ನಮ್ಮ ಮನೆಯ ಹತ್ತಿರದ ಮನೆಯಾತ ಕಾರ್ ಹೊರತೆಗೆಯುವಾಗ ಹಾಕಿದ ಟ್ಯೂನಿ೦ದ ಎಲ್ಲರಿಗೂ ಎಚ್ಚರವಾಗಿ ಬಿಟ್ಟಿತ್ತು. “ನಿನ್ ಮನೆ ಕಾಯ್ವಾಗ ಅ೦ತ ಶಪಿಸಿಯೇ ನಾನು ಮಲಗಿದ್ದು.