ಭಾನುವಾರ ಬೆಳೆಗ್ಗೆ ತಿಂಡಿ ತಿನ್ನುತ್ತ ದಿನಪತ್ರಿಕೆಯಲ್ಲಿನ ಸಮಾಚಾರದ ಬಗ್ಗೆ ನಮ್ಮ ಮನೆಯ dining table ನಲ್ಲಿ ಸಖತ್ತಾದ ಬಿಸಿ ಚರ್ಚೆ ನಡಿಯುತ್ತಿತ್ತು. ನಮ್ಮ ತಂದೆ ಅಕ್ರಮ- ಸಕ್ರಮದ ಬಾಯಿಗೆ ಸಿಲುಕಿರುವ ಕಟ್ಟಡಗಳ ಬಗ್ಗೆ ಮಾತನಾಡುತ್ತಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಕ್ಕಸಕ್ಕೆ ತುಂಬಿರುವ ಹಣದ ರಾಶಿ, ಅದರಿಂದ ಆಗಬಹುದಾದ ಆಯ-ವ್ಯಯಗಳು, ಅನುಕೂಲ-ಪ್ರತಿಕೂಲಗಳು, ನ್ಯಾಯಾಲಯದಿಂದ ರಾಜ್ಯಪಾಲರಿಗೆ, ರಾಜ್ಯಪಾಲರಿಂದ ನ್ಯಾಯಾಲಯಕ್ಕೆ ಚೆಂಡಂತೆ ಹೊರಳಾಡುತ್ತಿರುವ ತೀರ್ಪು,ಇವೆಲ್ಲದರ ಬಗ್ಗೆ ಮಾತಾಡುತ್ತಿದ್ದರು. ನಮ್ಮಮ್ಮ ದೊಡ್ಡ ದೊಡ್ಡ ಮನೆಗಳನ್ನ ಕಟ್ಟಿಸಿ,ಸಿಕ್ಕಾಪಟ್ಟೆ ಹಣ ವ್ಯಯಿಸಿ interior design ಮಾಡಿದ್ದೆಲ್ಲಾ demolish ಮಾಡಿದಾಗ waste ಆಗಿಹೋಗತ್ತಲ್ಲ,ಅದನ್ನ ಎಷ್ಟು ಆಸೆ ಅಕ್ಕರೆ ಆಸ್ಥೆ ಇಂದ ಕಾಪಾಡಿರುತ್ತೀವಿ,ಅಂತ ಯೋಚನೆ ಮಾಡ್ತಿದ್ರು...ನನಗೆ ನಾನು ಓದಿದ ಒಂದು ರಷ್ಯನ್ ಕಥೆ ನೆನಪಾಯಿತು.ನಮಗೆ ಬಿ.ಎಸ್ಸಿ ನಲ್ಲಿ ಇಂಗ್ಲೀಷ್ ಪಾಠವೊಂದಿತ್ತು. "How much land does a man need ? " ಅಂತ ಆ ಕಥೆಯ ಶೀರ್ಷಿಕೆ.ರಷ್ಯಾದ ಪುಟ್ಟ ಹಳ್ಳಿಯಲ್ಲಿನ ಒಬ್ಬ ಸಣ್ಣ ರೈತ,ಹೆಚ್ಚು ಹಣದ ಆಸೆಗಾಗಿ, ಇದ್ದ ಸಣ್ಣ ಜಮೀನು ಮತ್ತು ಮನೆಯನ್ನು ಮಾರಿ, ಕಾಡು ಜನರ ಬಳಿಗೆ ಹೋಗಿ ಕಾಡಿನ ಸ್ವಲ್ಪ ಭಾಗವನ್ನು ನೀಡಲು ಬೇಡಿಕೊಳ್ಳುತ್ತಾನೆ. ಅವರು ಒಂದು ಗುಡ್ಡದ ತಪ್ಪಲಿಗೆ ಕರೆದುಕೊಂಡು ಹೋಗಿ, ಸೂರ್ಯೋದಯದಿಂದ ಸೂರ್ಯಾಸ್ತವಾಗುವ ವರೆಗೆ ನೀನು ಎಲ್ಲೆಲ್ಲಿ ಹೋಗಿ ನಿನ್ನ ನೇಗಿಲಿನಿಂದ ರೇಖೆ ಹಾಕುವೆಯೋ, ಆ ಕಾಡಷ್ಟೂ ನಿನ್ನದೇ ಎನ್ನುತ್ತಾರೆ. ಊಟ ಮಾಡದೆ,ನಿದ್ದೆ ಲೆಖ್ಖಿಸದೇ, ಆ ರೈತನು ಓಡಿ ಓಡಿ 80 ಎಕರೆ ಸಂಪಾದಿಸಿ ಇನ್ನೇನು ಸೂರ್ಯಾಸ್ತವಾಗ್ಬೇಕು ಅನ್ನುವ ಹೊತ್ತಿಗೆ ಮತ್ತೆ ಆ ಗುಡ್ಡದ ತಪ್ಪಲಿಗೆ ಬರುವಷ್ಟರಲ್ಲಿ ನಿತ್ರಾಣವಾಗಿ ಬಿದ್ದು ಪ್ರಾಣ ಕಳೆದುಕೊಂಡಿರುತ್ತಾನೆ. ಕೊನೆಗೆ ಅವನನ್ನು ಅದೇ ಕಾಡಿನಲ್ಲಿ 6 ಅಡಿ ಉದ್ದ,3 ಅಡಿ ಅಗಲದ ಗುಂಡಿಯೊಂದರಲ್ಲಿ ಹೂಳಲಾಗುತ್ತದೆ.
ನಾವು ಈ ಮಹಾನಗರದಲ್ಲಿ ಒಂದು ನಿವೇಶನಕ್ಕಾಗಿ ಪರದಾಡುವುದೂ ಹೀಗೆಯೇ ಅಲ್ಲವೆ ? ಮನೆಯೊಂದನ್ನು ಕಟ್ಟಿ, ಗೃಹಪ್ರವೇಶ ಮಾಡಿ, ಬಂಧು ಬಾಂಧವರನ್ನೆಲ್ಲ ಸಂತೃಪ್ತಿ (?)ಪಡಿಸುವಷ್ಟರಲ್ಲಿಯೇ ಸಾಕಾಗಿ ಹೋಗಿರುತ್ತದೆ.ಆಮೇಲೆ,ನಾವು ಕಟ್ಟಿಸಿರುವ ಮನೆಯನ್ನು ಕಾಪಾಡುವುದೇ ಹರಸಾಹಸವಾಗಿಬಿಡುತ್ತದೆ. ನಮ್ಮ ಅಮ್ಮ ಒಂದು ಮಾತು ಹೇಳಿದರು ಮೊನ್ನೆ.ನನಗೆ ಅದು ತುಂಬಾ ನಿಜವೆನಿಸಿತು. "30x40 ನೆಲದಲ್ಲಿ ನಾವು ಇಂದ್ರಪ್ರಸ್ಥ ಅರಮನೆಯನ್ನು ಕಟ್ಟಲು ಸಾಧ್ಯವೇ? ಅಂತಸ್ತುಗಳನ್ನು ಮೇಲಕ್ಕೇರಿಸಿದಷ್ಟು ನಮ್ಮ ಕಾಲು ನೋವು ಜಾಸ್ತಿಯಾಗುತ್ತದೆ.ವಯಸ್ಸಾದ ಮೇಲೆ ನಮಗೆ glazed tiles ಬೇಕಿಲ್ಲ, bath tub ಬೇಕಿಲ್ಲ, ಬೇಕಿರುವುದು ಒಂದು ಸಣ್ಣ ಕೋಣೆಯಷ್ಟೇ !".
ಇಂದ್ರಪ್ರಸ್ಥದ ಐಷಾರಾಮಿಗೆ ಇಂಬು ಕೊಟ್ಟಿದ್ದಕ್ಕೆ ಈ ಅಕ್ರಮ ಕಟ್ಟಡಗಳು ಅವತರಿಸಿದ್ದು.ಗಾಳಿ ಬೀಸಲು ಎರಡು ಅಡಿಯನ್ನು ಬಿಡದಷ್ಟರ ಮಟ್ಟಿಗೆ ನಾವು ಧನಪಿಪಾಸಿಗಳು, ಮೋಹವಶರಾಗಿದ್ದೇವೆ. ದುಡ್ಡಿನಿಂದ ನಾವು ಏನನ್ನು ಸಕ್ರಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ ? ನಮ್ಮ ಈ ಅಕ್ರಮ ಆಸೆಗಳನ್ನೇ ? ನಿಯಮಗಳನ್ನು ಪಾಲಿಸದ ನಮ್ಮ ಮರ್ಕಟ ಮನೋಭಾವನೆಯನ್ನೇ ? ಅಥವಾ ಕೊಟ್ಟ/ ಪಡೆದ ಲಂಚದ ಅಪರಾಧೀ ಪ್ರಜ್ಞೆಯನ್ನೇ ? ಆಗಿರುವ ಅಕ್ರಮದ ಮೂಲ ಹುಡುಕಿದರೆ ಅದು ಸಿಕ್ಕೀತೇ ? ಮೂಲ corporation office ಓ ? ಅಥವಾ ನಮ್ಮ ಮನಸ್ಸೋ? ನಾವು ನೆಲಸಮಾಧಿ ಮಾಡಬೇಕಿರುವುದು ನಮ್ಮ ಮನೆಗಳನ್ನೋ ? ಅಥವಾ ನಮ್ಮ ಮನಸ್ಸಿನಲ್ಲಿರುವ ಅತಿಆಸೆಗಳನ್ನೋ ?
ಕಟ್ಟಡಗಳ ಮೇಲಿನ "ಅಕ್ರಮ" ತಲೆಬರಹ ಕಂಡಾಗಲೆಲ್ಲ ನನಗೆ "How much land does a man need ?" ನೆನಪಾಗುತ್ತದೆ.
4 comments:
sikkkkaaaapaTTe soooooper aagide!!
:-) very nice!
"how much land does a man need" kathe ultimate!!! :-)
finally what counts is how much ur able to smile with what u've done! en guDDe haakidre enu..
konege yaariguuu khushi koDde, taaanu khushi paDde saaytaane!
ಬಂಧು ಬಾಂಧವರನ್ನೆಲ್ಲ ಸಂತೃಪ್ತಿ (?)ಪಡಿಸುವಷ್ಟರಲ್ಲಿಯೇ
--> idralli (?) nice! :)) :))
ವಯಸ್ಸಾದ ಮೇಲೆ ನಮಗೆ glazed tiles ಬೇಕಿಲ್ಲ, bath tub ಬೇಕಿಲ್ಲ, ಬೇಕಿರುವುದು ಒಂದು ಸಣ್ಣ ಕೋಣೆಯಷ್ಟೇ !".
L-) yesssss!! nanna pooorNa sammata! ondu saNNa kONe jote namma jana pakka iddre sooooper!! tarle maadkond, maataaadkond irO haagirbeku :-D
ದುಡ್ಡಿನಿಂದ ನಾವು ಏನನ್ನು ಸಕ್ರಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ ? ---> heheheeee nanguuu gottillammaaa :-D
kaasu kaasu kaasu! kaasondara mele jagattu tara ide!
roTTi guu rokka.. bekkiguuu rokka!
nange ommomme ansutte, naavu praaNigaL tara, makLu tara yaak irbaardu anta, avukke duddina parivilla! aaaaaraaam life-u!! :-)
allide nammane illi bandhe summane.... :-)
"iShTu dorakidare mattaShTu bEkembaase,
aShTu dorakidare matteShTaraase?"
anta purandara dasaru aa kaaladalle haaDi ee sthiti aagina kaaladindlu namage bandiro baLuvaLi anta torsbiTru... eegina janaranna dooShisi prayOjanavillama.. neenu heLod ashToo oppide.. tumba oLLe lEkhana.. aadre idaralliro tiruLanna janaru yavaga artha maaDkotaaro, yavaga realize maaDkotaaro... kaadu noDbeku..
Chennagi barediddeeri ...
Post a Comment